ಭಾನುವಾರದ ಸ್ಪೆಷಲ್ ಬೀಟ್ ರೂಟ್ ಹಲ್ವಾ

ಭಾನುವಾರ, 5 ಜನವರಿ 2014 (11:23 IST)
PR

ಬೇಕಾದ ಸಾಮಗ್ರಿಗಳು.
ಬೀಟ್ ರೂಟ್ ಚೂರುಗಳು ನಾಲ್ಕು ಕಪ್ಪುಗಳು, ಕೊಬ್ಬರಿ ತುರಿ ಐದು ಚಮಚೆ, ಸಿಹಿ ಕೋವಾ ಒಂದು ಬಟ್ಟಲು , ಬೆಲ್ಲ ಅರ್ಧ ಕಪ್ಪು, ತುಪ್ಪ ಎರಡು ಕಪ್ಪು, ಬಾದಾಮಿ ಚೂರುಗಳು ಅರ್ಧ ಕಪ್, ಗೋಡಂಬಿ ಮೂರು, ಚೆರ್ರಿ ಒಂದು

ಮಾಡುವ ವಿಧಾನ:
ತುಪ್ಪವನ್ನು ಬಿಸಿ ಮಾಡಿ ಬಿಟ್ ರೂಟ್ ಚೂರುಗಳನ್ನು ಹುರಿಯ ಬೇಕು. ಅದರಲ್ಲಿ ಬೆಲ್ಲ, ಕೊಬ್ಬರಿತುರಿ, ಕೋವಾ ಹಾಕಿ ಚೆನ್ನಾಗಿ ಮಿಶ್ರ ಮಾಡ ಬೇಕು, ಬಾದಾಮಿ ಪುಡಿಯನ್ನು ಸಹ ಇದರಲ್ಲಿ ಬೆರಸಿ ಹುರಿಯ ಬೇಕು. ಹಲ್ವಾ ಬೆಂದ ಬಳಿಕ ಅದನ್ನು ತುಪ್ಪ ಸವರಿದ ಬಟ್ಟಲಿಗೆ ಹಾಕ ಬೇಕು. ನಂತರ ಬಾದಾಮಿ , ಗೋಡಂಬಿ ಮತ್ತು ಚರ್ರಿಯಿಂದ ಅಲಂಕರಿಸ ಬೇಕು.

ವೆಬ್ದುನಿಯಾವನ್ನು ಓದಿ