ಮಜ್ಜಿಗೆ ಹುಳಿ (Mjjige Huli)

ಸೋಮವಾರ, 15 ಅಕ್ಟೋಬರ್ 2012 (18:22 IST)
ಮಜ್ಜಿಗೆ ಹುಳಿ (Mjjige Huli)

ಬೇಕಾಗುವ ಸಾಮಾನುಗಳು:

1) 2 ಕಪ್ ಮೊಸರು,
2) ಕುಂಬಳ ಕಾಯಿ,
3) 2 ಹಸಿ ಮೆಣಸಿನ ಕಾಯಿ,
4) 1/2 ಬೆಳ್ಳುಳ್ಳಿ,
5) ಹಸಿ ಶುಂಠಿ,
6) 3 ಕೆಂಪು ಮೆಣಸಿನಕಾಯಿ,
7) 1/2 ಟೇಬಲ್ ಸ್ಪೂನ್ ಹರಿಸಿನ,
8) ಸಾಸಿವೆ,
9) 2 ಟೇಬಲ್ ಸ್ಪೂನ್ ಎಣ್ಣೆ,
10) ರುಚಿಗೆ ತಕ್ಕ ಉಪ್ಪು,

ಮಾಡುವ ವಿದಾನ:

1.ಮೊಸರು,ಹಸಿ ಮೆಣಸಿನ ಕಾಯಿ,ಬೆಳ್ಳುಳ್ಳಿ,ಹಸಿ ಶುಂಠಿಯನ್ನು ಮತ್ತು ನೀರನ್ನು ಮಿಕ್ಸರ್ ನಲ್ಲಿ 3 ನಿಮಿಷ ಗಳ ಹಾಕಬೇಕು.

2.ಕುಂಬಳ ಕಾಯಿ ಯನ್ನು ಚಿಕ್ಕದಾಗಿ ಕತ್ತರಿಸಿ,ಹರಿಸಿನ ಹಾಕಿ ಬೇಯಿಸಿ ಕೊಳ್ಳಬೇಕು.

3.ಒಂದು ಪಾತ್ರೆ ಯನ್ನು ಒಲೆಯ ಮೇಲೆ ಇಟ್ಟು,ಎಣ್ಣೆ,ಸಾಸಿವೆ,ಕೆಂಪು ಮೆಣಸಿನ ಕಾಯಿ ಹಾಕಿ,ಒಗ್ಗರಣೆ ಮಾಡಿಕೊಳ್ಳಬೇಕು.

4.ಈಗ ಇನ್ನೊಂದು ಪಾತ್ರೆ ಗೆ mixy ಯಲ್ಲಿ ಮಾಡಿಕೊಂಡ ಮೊಸರು,ಬೇಯಿಸಿದ ಕುಂಬಳ ಕಾಯಿ,ಒಗ್ಗರಣೆ,ಉಪ್ಪು ರುಚಿಗೆ ತಕ್ಕಸ್ಟುಹಾಕಿದರೆ ಮೊಸರು ಹುಳಿ ಸಿದ್ದವಾಗುತದೆ.

ಸೂಚನೆ:ಕುಂಬಳ ಕಾಯಿ ಬದಲು ಬೀನ್ಸ್,ಸೌತೆಕಾಯಿ ಯನ್ನು ಹಾಕಬಹುದು.

ವೆಬ್ದುನಿಯಾವನ್ನು ಓದಿ