ರುಚಿಕಟ್ಟಾದ ತರಕಾರಿ-ಹಣ್ಣಿನ ಸಲಾಡ್

ಶನಿವಾರ, 4 ಜನವರಿ 2014 (10:44 IST)
PR
ಬೇಕಾಗುವ ಸಾಮಗ್ರಿಗಳು : ಮಧ್ಯಮ ಗಾತ್ರದ ಸೇಬು - 1
ಕ್ಯಾಪ್ಸಿಕಂ - 1
ಡೆಲ್ಲಿ ಕ್ಯಾರೆಟ್ - 1
ಎಲೆ ಕೋಸು ಅಥವಾ ಸ್ಪಿನಾಚ್ - 1/4 ಭಾಗ
ಸೌತೇಕಾಯಿ - 1/4 ಭಾಗ
ಬಿಡಿಸಿದ ದಾಳಿಂಬೆ - 1 ಹಿಡಿ
ನೆನೆಸಿದ ಕರಿ ಒಣ ದ್ರಾಕ್ಷಿ -ಒಂದು ಹಿಡಿ

ಡ್ರೆಸ್ಸಿಂಗ್‌ಗೆ: ಆಲಿವ್ ಆಯಿಲ್ - 1 ಟೇಬಲ್ ಚಮಚ
ವೈಟ್ ವಿನೆಗರ್ - 2
ಉಪ್ಪು - ರುಚಿಗೆ ತಕ್ಕಷ್ಟ
ಕರಿ ಕಾಳು ಮೆಣಸಿನ ಪುಡಿ - ½ ಚಮಚ.

ಮಾಡುವ ವಿಧಾನ : ಎಲ್ಲತರಕಾರಿಗಳು ಉದ್ದವಾಗಿ , ಪುಟ್ಟ ಪುಟ್ಟ ಹೋಳುಗಳಂತೆ ಕತ್ತರಿಸಿಟ್ಟುಕೊಳ್ಳಿ . ಮೊದಲು ನೆನೆಸಿಟ್ಟ ದ್ರಾಕ್ಷಿಯನ್ನಕೈಯಿಂದ ಹಿಚುಕಿ ಸ್ವಲ್ಪ ಮೆತ್ತಗೆ ಮಾಡಿ ಕೊಳ್ಳಿ. ಡ್ರೆಸ್ಸಿಂಗ್ ಪದಾರ್ಥಗಳನ್ನು ಒಂದು ಸಣ್ಣ ಬಟ್ಟಲಿನಲ್ಲಿ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಒಂದು ದೊಡ್ಡ ಬಟ್ಟಲಿನಲ್ಲಿ ಎಲ್ಲ ತರಕಾರಿಗಳನ್ನೂ ಬೆರೆಸಿ. ಇದರ ಮೇಲೆ ಡ್ರೆಸ್ಸಿಂಗ್ ಸುರಿದು ನಿಧಾನವಾಗಿ ಬೆರಸಿ. ನಂತರ ಅದನ್ನು ಸರ್ವ್ ಮಾಡಿ.ಸಂಜೆ ಮಕ್ಕಳಿಗೆ ಇದನ್ನು ನೀಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಷ್ಟೇ ಅಲ್ಲದೆ , ಇದು ಮನೆ ಮಂದಿಗೆ ಆರೋಗ್ಉಂಟುಮಾಡುತ್ತದೆ. ಹಸಿ ತರಕಾರಿ ಹಾಗೆ ತಿನ್ನುವುದಕ್ಕೆ ಬೇಸರ ಇದ್ದಾಗ ಈ ರೀತಿ ಮಾಡಿ ಸೇವಿಸಬಹುದು.

ವೆಬ್ದುನಿಯಾವನ್ನು ಓದಿ