ಬೇಕಾದ ಸಾಮಗ್ರಿಗಳು: ಸ್ಟಫ್ಡ್ ಮಿರ್ಚಿ .. ಬೇಕಾದ ಸಾಮಗ್ರಿಗಳು: ಕಡಲೆ ಹಿಟ್ಟು, ಉಪ್ಪು ರುಚಿಗೆ ತಕ್ಕಷ್ಟು, ಬೇಕಿಂಗ್ ಸೋಡಾ ಚಿಟುಕೆ, ಹಸಿಮೆಣಸಿಕಾಯಿ ಹತ್ತು, ಸ್ಟಫಿಂಗ್ ಗಾಗಿ ಈರುಳ್ಳಿ ಓಮ ಕಾಳಿನ ಪುಡಿ ಸ್ವಲ್ಪ , ಕರಿಯಲು ಎಣ್ಣೆ
ಮಾಡುವ ವಿಧಾನ : ಕಡಲೆ ಹಿಟ್ಟಿನಲ್ಲಿ ಬೇಕಿಂಗ್ ಸೋಡಾ ,ಉಪ್ಪು ಹಾಕಿ ಪೇಸ್ಟ್ ನಂತೆ ಕಲಿಸಿಕೊಳ್ಳಿ. ಆ ಬಳಿಕ ಮೆಣಸಿನ ಕಾಯಿ ತೆಗೆದುಕೊಂಡು ಅದನ್ನು ಮಧ್ಯದಲ್ಲಿ ಸೀಳಿರಿ ಅದರಲ್ಲಿರುವ ಬೀಜಗಳನ್ನು ತೆಗೆದು. ಈ ಕಾಯನ್ನು ಅರ್ಧ ಗಂಟೆ ಉಪ್ಪು ಬೆರೆತ ನೀರಿನಲ್ಲಿ ನೆನೆಸಿಡಿ. ಬಳಿಕ ಮೆಣಸಿನ ಕಾಯಿಯನ್ನು ನೀರಿನಿಂದ ತೆಗೆದು ಒಂದು ಟಿಶ್ಯೂ ಪೇಪರ್ ಮೇಲೆ ಇಟ್ಟು ನೀರಿನ ಅಂಶ ತೆಗೆಯಿರಿ ಈರುಳ್ಳಿಯನ್ನು ಚಿಕ್ಕ ಚೂರುಗಳಾಗಿ ಕತ್ತರಿಸಿ ( ಮೊದಲೇ ಕತ್ತರಿಸಿಟ್ಟುಕೊಳ್ಳಿ) ಅದನ್ನು ಮೆಣಸಿನ ಕಾಯಿಯ ಮಧ್ಯದಲ್ಲಿ ಇಟ್ಟು ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಹದವಾಗಿ ಕರಿಯಿರಿ.