ಹೆಸರುಕಾಳು - 1 ಕಪ್ ತೆಂಗಿನತುರಿ - ಅರ್ಧ ಕಪ್ ಕರಿಬೇವಿನ ಸೊಪ್ಪು ಶುಂಠಿ - ಸಣ್ಣ ತುಂಡು ಉಪ್ಪು - ರುಚಿಗೆ ತಕ್ಕಷ್ಟು ಮೆಣಸು - ಸ್ವಲ್ಪ ಎಣ್ಣೆ
ಪಾಕ ವಿಧಾನ:
ಹೆಸರುಕಾಳನ್ನು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಇದನ್ನು ನೀರುಹಾಕದೆ ತರತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿದ ಶುಂಠಿ, ಕರಿಬೇವು, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು, ಶುಂಠಿ ಸೇರಿಸಿ ಬೇಕಿದ್ದರೆ ಸ್ವಲ್ಪ ಹುಳಿ ಮೊಸರನ್ನು ಸೇರಿಸಿ ಚೆನ್ನಾಗಿ ಕಲಸಿ. ನಂತರ ಎಣ್ಣೆಯಲ್ಲಿ ಕರಿಯಿರಿ.