1/2 ಕಪ್ ಅವರೆ 1/2 ಕಪ್ ಬಟಾಣಿ 1/2 ಚಮಚ ಜೀರಿಗೆ ಸ್ವಲ್ಪ ಇಂಗು 1 ಚಮಚ ಶುಂಠಿ-ಹಸಿರು ಮೆಣಸಿನ ಪೇಸ್ಟ್ 1/2 ಚಮಚ ಬೆಳ್ಳುಳ್ಳಿ ಪೇಸ್ಟ್ 2 ಈರುಳ್ಳಿ 2 ಟೊಮೇಟೊ 1/4 ಚಮಚ ಅರಶಿನ 1/2 ಚಮಚ ಮೆಣಸಿನ ಪುಡಿ ಕೊತ್ತಂಬರಿ ಪೌಡರ್ 1/4 ಕಪ್ ಮೊಸರು 2 ಚಮಚ ಕಡಲೆಹಿಟ್ಟು 2 ಚಮಚ ಹಾಲು 1/2 ಚಮಚ ಸಕ್ಕರೆ 2 ಚಮಚ ಎಣ್ಣೆ
ತಯಾರಿಸುವ ವಿಧಾನ:
ಅವರೆಯನ್ನು ಬಿಸಿಯಾದ ಉಪ್ಪು ನೀರಿನಲ್ಲಿ 20 ನಿಮಿಷಗಳ ಕಾಲ ಬೇಯಿಸಿ ಬದಿಗಿಟ್ಟುಕೊಳ್ಳಿ. ಎಣ್ಣೆಯನ್ನು ಕಾಯಿಸಿ ಜೀರಿಗೆಯನ್ನು ಸೇರಿಸಿ. ಅವು ಶಬ್ಧ ಮಾಡಿದಾಗ, ಇಂಗು, ಶುಂಠಿ-ಹಸಿರು ಮೆಣಸಿನ
ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿಯನ್ನು ಸೇರಿಸಿ. ಈರುಳ್ಳಿ ಬೆಂದ ನಂತರ ಟೊಮೇಟೊ, ಅರಶಿನ, ಮೆಣಸಿನ ಪುಡಿ, ಕೊತ್ತಂಬರಿ ಪೌಡರ್ ಸೇರಿಸಿ ಮತ್ತು 5-10 ನಿಮಿಷ ಕಡಿಮೆ ಬೆಂಕಿಯಲ್ಲಿ
ಬೇಯಿಸಿ. ಮೊಸರು, ಕಡಲೆಹಿಟ್ಟು, ಹಾಲು, 3/4 ಕಪ್ ನೀರಿನ ಮಿಶ್ರಣ ಮಾಡಿ ಈರುಳ್ಳಿ-ಟೊಮೇಟೊದ ಗ್ರೇವಿಗೆ ಸೇರಿಸಿ. ಅವರೆ, ಬಟಾಣಿ, ಸಕ್ಕರೆ, ಉಪ್ಪು ಸೇರಿಸಿ 2 ನಿಮಿಷ ಕಲಸಿ. ಪಲ್ಯ ರೆಡಿ