ಆಲೂಗಡ್ಡೆ ಕ್ರಾಕೆಟ್ಸ್

ಶುಕ್ರವಾರ, 24 ಜನವರಿ 2014 (09:54 IST)
PR
ಬೇಕಾಗುವ ಸಾಮಗ್ರಿಗಳು:

ಆಲೂಗಡ್ಡೆ ಅರ್ಧ ಕೆಜಿ, ಕೋಳಿಮೊಟ್ಟೆ ಎರಡು, ಬ್ರೆಡ್ ಪುಡಿ ಒಂದು ಕಪ್, ಈರುಳ್ಳಿ ಕಾಲು ಕಪ್, ಹಾಲು ಎರಡು ಚಮಚೆ, ಮೈದಾ ಎರಡು ಚಮಚೆ, ಮೆಂತ್ಯದ ಪುಡಿ ಒಂದು ಚಮಚೆ, ಉಪ್ಪು

ಮಾಡುವ ವಿಧಾನ:

ಆಲೂಗಡ್ಡೆಯನ್ನು ಬೇಯಿಸಿ ಅದರ ಸಿಪ್ಪೆ ತೆಗೆದು ಕಿವುಚಿರಿ . ಇದರಲ್ಲಿ ಹಾಲು ,ಉಪ್ಪು, ಮೆಂತ್ಯದ ಪುಡಿ ಕತ್ತರಿಸಿದ ಈರುಳ್ಳಿ ಮೊಟ್ಟೆಯ ಬಿಳಿ ಭಾಗ ಸೇರಿಸಿ ಮಿಶ್ರ ಮಾಡಿ ಕಲಿಸಿರಿ. ಈ ಮಿಶ್ರಣವನ್ನು ಗುಂಡಗೆ ಕಟ್ಲೆಟ್ ರೀತಿಯಲ್ಲಿ ಮಾಡಿ. ಅಂಗೈನಲ್ಲಿ ಒತ್ತಿ ಬ್ರೆಡ್ ಪುಡಿಯಲ್ಲಿ ಹೊರಳಾಡಿಸಿ ಎಣ್ಣೆಯಲ್ಲಿ ಕರೆಯಿರಿ.

ವೆಬ್ದುನಿಯಾವನ್ನು ಓದಿ