ಕ್ಯಾರೆಟ್ ಕಟ್ಲೆಟ್

ಬೇಕಾಗುವ ವಸ್ತುಗಳು: 250 ಗ್ರಾಂ ಕ್ಯಾರೆಟ್, 1 ಚಮಚ ಖಾರಪುಡಿ, 150 ಗ್ರಾಂ ಆಲೂಗಡ್ಡೆ, ಅರ್ಧ ಚಮಚ ಚಾಟ್ ಮಸಾಲೆ ಪುಡಿ, 100 ಗ್ರಾಂ ಈರುಳ್ಳಿ, ಕರಿಯಲು ಎಣ್ಣೆ, ಚಿಕ್ಕ ಕಂತೆ ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ: ಕ್ಯಾರೆಟ್ ಮತ್ತು ಆಲುಗಡ್ಡೆಯನ್ನು ಬೇಯಿಸಿಕೊಳ್ಳಿ. ಆಲೂಗಡ್ಡೆಯನ್ನು ಸಿಪ್ಪೆ ಸುಲಿದು ತೆಗೆದು ಪುಡಿ ಮಾಡಿ ಇಡಿ. ಕ್ಯಾರೆಟ್‌ನ್ನು ಜಜ್ಜಿ ತೆಗೆದಿಡಿ. ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ. ಜಜ್ಜಿದ ಕ್ಯಾರೆಟ್, ಪುಡಿಮಾಡಿದ ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಮಿಶ್ರಮಾಡಿ. ಇದಕ್ಕೆ ಖಾರದ ಪುಡಿ, ಚಾಟ್ ಮಸಾಲೆ ಪುಡಿ ಮತ್ತು ಅಗತ್ಯವಿರುವಷ್ಟುಉಪ್ಪು ಸೇರಿಸಿ ಕಲಸಿ. ಕಟ್ಲೆಟ್ ಆಕಾರ್ಕಕೆ ಒತ್ತಿ ಎಣ್ಣೆಯಲ್ಲಿ ಕರಿಯಿರಿ.

ವೆಬ್ದುನಿಯಾವನ್ನು ಓದಿ