ಕ್ಯಾರೆಟ್ ಸೂಪು

ಬೇಕಾಗುವ ಸಾಮಾಗ್ರಿಗಳು: ಕ್ಯಾರೆಟ್, ಆಲೂಗಡ್ಡೆ, ಈರುಳ್ಳಿ, ಬೆಣ್ಣೆ, ಹಾಲು, ಕರಿಮೆಣಸು, ಪುದೀನಾ ಮತ್ತು ಉಪ್ಪು
ಮಾಡುವ ವಿಧಾನ: ಕ್ಯಾರೆಟ್ ಮತ್ತು ಆಲೂಗಡ್ಡೆಯನ್ನು ಪಾತ್ರೆಯಲ್ಲಿ ಬೇಯಿಸಿಕೊಳ್ಳಿ. ತಣ್ಣಗಾದ ನಂತರ ಮಿಕ್ಸರ್‌ನಲ್ಲಿ ಹಾಕಿ ಜ್ಯೂಸ್ ರೀತಿಯಲ್ಲಿ ರುಬ್ಬಿಕೊಳ್ಳಿ. ಮತ್ತೊಂದೆಡೆ ಬೇಸಿಸಿದ ಬೆಣ್ಣೆಗೆ ಈರುಳ್ಳಿ ಹಾಕಿಕೊಂಡು ಹುರಿದುಕೊಳ್ಳಿ. ನಂತರ ಜ್ಯೂಸ್ ರೀತಿಯಲ್ಲಿ ರುಬ್ಬಿಕೊಂಡ ಪದಾರ್ಥಕ್ಕೆ ಹಾಲು, ಉಪ್ಪು ಹಾಗೂ ಮೆಣಸು ಬೆರೆಸಿಕೊಂಡು ಚೆನ್ನಾಗಿ ಕಲೆಸಿ, ಕುದಿಸಿ. ಇದಕ್ಕೆ ಪುದೀನಾ ಉದುರಿಸಿ.

ವೆಬ್ದುನಿಯಾವನ್ನು ಓದಿ