ಗರಿಗರಿ ಶ್ಯಾವಿಗೆ ಪಕೋಡ

ಗುರುವಾರ, 16 ಜನವರಿ 2014 (13:06 IST)
PR
ಬೇಕಾಗುವ ಸಾಮಗ್ರಿಗಳು :
ಶ್ಯಾವಿಗೆ ಒಂದು ಕಪ್, ಕಡಲೆ ಹಿಟ್ಟು ಒಂದು ಕಪ್, ಈರುಳ್ಳಿ ಕತ್ತರಿಸಿದ್ದು ಅರ್ಧ ಕಪ್, ಕರಿಬೇವಿನ ಎಲೆ ಕತ್ತರಿಸಿದ್ದು ಒಂದು ಚಮಚೆ, ಬೇಕಿಂಗ್ ಪೌಡರ್ ಒಂದು ಚಿಟುಕೆ, ಕೊತ್ತಂಬರಿ ಸೊಪ್ಪು ಕತ್ತರಿಸಿದ್ದು ಎರಡು ಸ್ಪೂನ್, ಅಚ್ಚ ಕಾರದ ಪುಡಿ ಒಂದು ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು ..

ಮಾಡುವ ವಿಧಾನ :
ಸ್ಟೇವ್ ಮೇಲೆ ಬಾಣಲಿ ಎಣ್ಣೆ ಇಟ್ಟು ಅದು ಬಿಸಿಯಾದ ಬಳಿಕ ಅದರಲ್ಲಿ ಶ್ಯಾವಿಗೆ ಹಾಕಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ಇದನ್ನು ಒಂದು ಪಾತ್ರೆಯಲ್ಲಿ ಕಿಡಿ. ಒಂದು ಲೋಟ ಬಿಸಿನೀರನ್ನು ಆ ಶ್ಯಾವಿಗೆ ಇರುವ ಪಾತ್ರೆಯಲ್ಲಿ ಹಾಕಿ ಸ್ವಲ್ಪ ನೆನಸಿಡಿ. ಅದು ಮೆತ್ತಗಾದ ಬಳಿಕ ತೆಗೆದು ನೀರು ಸೋಸಿ ಅದಕ್ಕೆ ಕಡಲೆ ಹಿಟ್ಟು, ಈರುಳ್ಳಿ, ಕರಿಬೇವು, ಕಾರದ ಪುಡಿ, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರಸಿ ಗಟ್ಟಿಯಾಗಿ ಕಲಿಸಿಕೊಳ್ಳಿ. ಅದನ್ನು ಉಂಡೆ ಮಾಡಿ ಕಾದ ಎಣ್ಣೆಯಲ್ಲಿ ಕರೆಯಿರಿ. ಇದನ್ನು ಟಮೇಟೊ ಕೆಚಪ್ ಜೊತೆ ಸೇವಿಸಿ.

ವೆಬ್ದುನಿಯಾವನ್ನು ಓದಿ