ಬೇಕಾಗುವ ಸಾಮಾಗ್ರಿಗಳು: 4 ಟೊಮೇಟೊ 50 ಗ್ರಾಂ ಬ್ರೆಡ್ ಚೂರು 50 ಗ್ರಾಂ ತುಪ್ಪ 3 ಈರುಳ್ಳಿ ಕೊತ್ತಂಬರಿ ಸೊಪ್ಪು ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ: ಟೊಮೇಟೊದ ತಲೆಯ ಭಾಗವನ್ನು ಕತ್ತರಿಸಿ ಅದರ ಒಳಗಿನ ತಿರುಳನ್ನು ತೆಗೆಯಿರಿ. ಈ ತಿರುಳನ್ನು ಉಳಿದ ಸಾಮಾಗ್ರಿಯೊಂದಿಗೆ ಮಿಕ್ಸ್ ಮಾಡಿ ಮತ್ತು ಟೊಮೇಟೊದ ಒಳಗೆ ಸೇರಿಸಿ. ಟೊಮೇಟೊದ ತಲೆಯ ಭಾಗವನ್ನು ತುಪ್ಪದಿಂದ ಸವರಿ ಮತ್ತು ಅದನ್ನು ಸ್ವಲ್ಪ ಎಣ್ಣೆ ಬಳಸಿ 10-15 ನಿಮಿಷ ಕಾವಲಿಗೆ ಹಾಕಿ ಕಾಯಿಸಿ. ಇದನ್ನು ಊಟ ಮಾಡುವಾಗ ಅಥವಾ ಹಾಗೆನೇ ತಿನ್ನಬಹುದು.