ಟೊಮೇಟೊ ಸೂಪ್

ಬೇಕಾಗುವ ಸಾಮಗ್ರಿಗಳು: ಆಪಲ್ ಟೊಮೇಟೊ 1/2 kg ಕಿತ್ತಲೆ ಹಣ್ಣು 1 ಜೇನು ತುಪ್ಪ 2 ಚಮಚ ಮೆಣಸು ಪುಡಿ ರುಚಿಗೆ ತಕ್ಕಷ್ಟು ಉಪ್ಪು ರುಚಿಗೆ ತಕ್ಕಷ್ಟು ತುಪ್ಪ 2 ಚಮಚ ಮಾಡುವ ವಿಧಾನ: ಟೊಮೇಟೊವನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಕಿತ್ತಳೆ ಹಣ್ಣಿನ ರಸ ತೆಗೆದು ಅದನ್ನು ಬೇಯಿಸಿದ ಟೊಮೇಟೊಗೆ ಸೇರಿಸಿ ಮಿಶ್ರಣ ಮಾಡಿ. ನಂತರ ಅದಕ್ಕೆ ಜೇನು ತುಪ್ಪ, ಮೆಣಸುಪುಡಿ, ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ, ಉಪ್ಪನ್ನು ಹಾಕಿ ಇಳಿಸಿ. ಆರಿದ ಮೇಲೆ ಕುಡಿಯಲು ಕೊಡಿ.

ವೆಬ್ದುನಿಯಾವನ್ನು ಓದಿ