2 ಕಪ್ ಬಾಸುಮತಿ ಅಕ್ಕಿ 2 ಕಪ್ ತರಕಾರಿ(ಬಟಾಟೆ, ಕ್ಯಾರೆಟ್, ಬೀನ್ಸ್, ಬಟಾಣಿ ಮತ್ತು ಹೂಕೋಸು) 1 ಈರುಳ್ಳಿ 1 ಕಪ್ ಮೊಸರು 2 ಟೊಮೇಟೊ 1 ಚಮಚ ಮೆಣಸಿನ ಪುಡಿ 1 ಚಮಚ ಕೊತ್ತಂಬರಿ ಪೌಡರ್ 4 ಲವಂಗ 1 ಏಲಕ್ಕಿ 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ 4 ಹಸಿರು ಮೆಣಸು 1 ಚಮಚ ಗರಂ ಮಸಾಲಾ 1 ಚಮಚ ಅರಶಿನ ತುಪ್ಪ
ಮಾಡುವ ವಿಧಾನ:
15 ನಿಮಿಷ ಅಕ್ಕಿಯನ್ನು ನೀರಿನಲ್ಲಿ ನೆನೆಯಿಸಿಡಿ. ತೊಳೆದು, 4 ಕಪ್ ನೀರು ಹಾಕಿ ಅಕ್ಕಿ ಬೇಯುವ ತನಕ ಸರಿಯಾಗಿ ಬೇಯಿಸಿ. ನಂತರ ಈ ಅಕ್ಕಿಯನ್ನು 30 ನಿಮಿಷಗಳವರೆಗೆ ಮೊಸರಿನಲ್ಲಿ ನೆನೆಸಿಡಿ. ಈರುಳ್ಳಿಯನ್ನು ತುಪ್ಪದಲ್ಲಿ ಕರಿಯಿರಿ. ಕತ್ತರಿಸಿದ ತರಕಾರಿಗಳನ್ನು ಹಾಕಿ 2 ನಿಮಿಷ ಕಾಯಿಸಿ. ಅದ್ದಿಟ್ಟ ಮಸಾಲಾವನ್ನು ತರಕಾರಿಗೆ ಸೇರಿಸಿ, 1 ಕಪ್ ನೀರನ್ನು ಸೇರಿಸಿ, ತರಕಾರಿ ಮೆದುವಾಗುವವರೆಗೆ ಬೇಯಿಸಿ. ತರಕಾರಿ ಬೆಂದ ನಂತರ ನೀರು ಇನ್ನೂ ಉಳಿದಿದ್ದರೆ, ಬಿಸಾಡಿ. ಬೇಯಿಸಿದ ಅನ್ನವನ್ನು ತರಕಾರಿಯೊಂದಿಗೆ 2 ನಿಮಿಷ ಕಲಸಿ. ಈರುಳ್ಳಿ ರೈಥಾದೊಂದಿಗೆ ಬಿಸಿಬಿಸಿಯಾಗಿ ಬಡಿಸಿ.