ಬೀಟ್‌ರೂಟ್ ರಸಂ

ಬೇಕಾಗುವ ಪದಾರ್ಥಗಳು: ಅರ್ಧ ಕಪ್ ಬೀಟ್‌ರೂಟ್, ನಾಲ್ಕು ಟೊಮೇಟೋ, ಒಂದು ಟೀಚಮಚ ಕರಿಮೆಣಸು, ಒಂದು ಟೀಚಮಚ ಜೀರಿಗೆ, ಆರು ಬೆಳ್ಳುಳ್ಳಿ, ಅರ್ಧ ಕಪ್ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು

ಮಾಡುವ ವಿಧಾನ: ಕರಿಮೆಣಸು, ಜೀರಿಗೆಯನ್ನು ಜತೆಗೆ ಹಾಕಿ ಒಂದೆರಡು ನಿಮಿಷ ಹುರಿಯಿರಿ. ನಂತರ ಅದಕ್ಕೆ ಬೀಟ್‌ರೂಟ್, ಟೊಮೇಟೋ, ಕೊತ್ತಂಬರಿ ಸೊಪ್ಪು, ಕರಿಬೇವನ್ನು ಹಾಕಿ. ಸ್ವಲ್ಪ ನೀರನ್ನು ಹಾಕಿ. ಅದನ್ನು ಸ್ವಲ್ಪ ಹೊತ್ತು ಬೇಯಿಸಿ, ಕೆಳಗಿಳಿಸಿ ತಣಿಯಲು ಬಿಡಿ. ನಂತರ ಎರಡು ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸಿಯಲ್ಲಿ ರುಬ್ಬಿ. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಸ್ವಲ್ಪ ಹೊಚ್ಚು ಒಲೆ ಮೇಲಿಡಿ. ನಂತರ ಒಂದು ಚಮಚ ತುಪ್ಪ ಹಾಕಿ. ಬೀಟ್‌ರೂಟ್ ರಸಂ ಸಿದ್ಧ.

ವೆಬ್ದುನಿಯಾವನ್ನು ಓದಿ