ಬೆಂಡೆ ಕಾಯಿ ಮಸಾಲ

ಶುಕ್ರವಾರ, 10 ಜನವರಿ 2014 (11:45 IST)
ಬೇಕಾಗುವ ಸಾಮಗ್ರಿಗಳು
PR

ಬೆಂಡೆ ಕಾಯಿ -175 ಗ್ರಾಂ , ಅವುಗೆ ಎಣ್ಣೆ -10 ಮಿಲಿ ಗ್ರಾಂ, ಜೀರಿಗೆ -2 ಗ್ರಾಂ,ಕತಾರಿಸಿದ ಈರುಳ್ಳಿ -25 ಗ್ರಾಂ,ಕತ್ತರಿಸಿದ ಟಮೇಟೊ-25 ಗ್ರಾಂ, ಶುಂಠಿ ಬೆಳ್ಳುಳ್ಳಿ ಪೇಸ್ಟ್- 5 ಗ್ರಾಂ, ಕಾರದ ಪುಡಿ -5 ಗ್ರಾಂ, ಜೀರಿಗೆ ಪುಡಿ -3 ಗ್ರಾಂ , ಧನಿಯಾ -3 ಗ್ರಾಂ , ಗರಂ ಮಸಾಲ -5ಗ್ರಾಮ್, ಅರಿಸಿನ-5ಗ್ರಾಮ್, ಕರ್ರಿ ಪೌಡರ್ 5ಗ್ರಾಮ್, ಗುಂಡಗೆ ಕತ್ತರಿಸಿದ ಈರುಳ್ಳಿ ಮತ್ತು ಟಮೇಟೊ ಚೂರುಗಳು, ರುಚಿಗೆ ತಕ್ಕಷ್ಟು ಉಪ್ಪು, ಅಲಂಕಾರಕ್ಕಾಗಿ ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ

ಬೆಂಡೆ ಕಾಯಿ ತಿಳಿ ಕಂಡು ಬಣ್ಣ ಬರುವವರೆಗೂ ಹುರಿದು ಅದನ್ನು ಒಂದು ಕಡೆ ತೆಗೆದಿಟ್ಟುಕೊಳ್ಳಿ, ಈಗ ಒಂದು ಬಾಣಲೆ ಅಥವಾ ಒಂದು ಪ್ಯಾನ್ ತೆಗೆದು ಕೊಳ್ಳಿ. ಅದರಲ್ಲಿ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಕತ್ತರಿಸಿದ ಈರುಳ್ಳಿ, ಟಮೇಟೊ ಚೂರುಗಳನ್ನು ಹಾಕಿ ಹುರಿಯಿರಿ. ಅದು ಕಂದು ಬಣ್ಣ ಬರುವವರೆಗೂ ಹುರಿದು ಅದರಲ್ಲಿ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಮಿಶ್ರ ಆದ ಬೇಕು.

ಎಣ್ಣೆ ಮೇಲೆ ತೇಲಿದ ಮೇಲೆ ಅದಕ್ಕೆ ಮಸಾಲೆಯನ್ನು ಸೇರಿಸ ಬೇಕು. ಅದರೊಂದಿಗೆ ಈಗಾಗಲೇ ಸಿದ್ಧ ಆಗಿರುವ ಬೆಂದೆ ಕಾಯಿ ಸೇರಿಸ ಬೇಕು ಈ ಪದಾರ್ಥವನ್ನು ಸ್ವಲ್ಪ ಕಾಲ ಒಲೆಯ ಮೇಲಿತ್ತು, ಆ ಬಳಿಕ ಕೆಳಗಿಳಿಸಿ. ಸಿದ್ಧವಾಗಿರುವ ಬೆಂದೆ ಮಸಾಲವನ್ನು ಕೊತ್ತಂಬರಿ, ಈರುಳ್ಳಿಯಿಂದ ಅಲಂಕರಿಸಿ.

ವೆಬ್ದುನಿಯಾವನ್ನು ಓದಿ