ಬೇಕಾಗುವ ಸಾಮಗ್ರಿ: 2 ಮೂಲಂಗಿ, 2 ಹಸಿರು ಕ್ಯಾಪ್ಸಿಕಂ, 1 ಕ್ಯಾರೆಟ್, 1 ಈರುಳ್ಳಿ, ಕರಿಮೆಣಸು, ಎರಡು ಟೀಚಮಚ ಆಲಿವ್ ಎಣ್ಣೆ, ಎರಡು ಟೀ ಚಮಚ ಲಿಂಬೆರಸ.
ಮಾಡುವ ವಿಧಾನ: ಮೂಲಂಗಿ, ಕ್ಯಾಪ್ಸಿಕಂ, ಕ್ಯಾರೆಟ್ಗಳ್ನನು ಕತ್ತರಿಸಿ ಇಟ್ಟುಕೊಳ್ಳಿ. ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಅರ್ಧ ಕಪ್ ಆಗುವಷ್ಟು ಸೇರಿಸಿ. ಅದಕ್ಕೆ ಆಲಿವ್ ಎಣ್ಣೆ, ಲಿಂಬೆರಸ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸಿನ ಪುಡಿ ಸೇರಿಸಿ. ಮಿಶ್ರಣವನ್ನು ಹಾಗೇ ಒಂದು ಗಂಟೆ ಕಾಲ ಫ್ರಿಜ್ನಲ್ಲಿಡಿ. ಫ್ರೆಶ್ ಆಗಿ ಬಡಿಸಿ.