ಮೂಲಂಗಿ ಸೊಪ್ಪುನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ಉದ್ದುದ್ದವಾಗಿ ಹೆಚ್ಚಿಕೊಳ್ಳಿ. ಒಂದು ಅಗಲ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಕಾದ ಮೇಲೆ ಅದಕ್ಕೆ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಈರುಳ್ಳಿ ಹಾಕಿ ಕೆಂಪಗೆ ಹುರಿಯಿರಿ. ಆ ಮೇಲೆ ಹೆಚ್ಚಿದ ಮೂಲಂಗಿ ಸೊಪ್ಪು, ಅಚ್ಚ ಮೆಣಸಿನ ಪುಡಿ, ಉಪ್ಪು ಹಾಕಿ ಕೆದಕಿ ಮುಚ್ಚಿಡಿ. ಐದೇ ನಿಮಿಷದ ನಂತರ ಕೆಳಗಿಳಿಸಿ. ಇದು ಆರೋಗ್ಯಕ್ಕೆ ತುಂಬಾ ಉತ್ತಮ