ಬೇಕಾಗುವ ಸಾಮಗ್ರಿಗಳು ಮೂಲಂಗಿ ಸೊಪ್ಪು - 2 ಕಟ್ಟು ಈರುಳ್ಳಿ - 2 ಅಚ್ಚ ಮೆಣಸಿನ ಪುಡಿ - 1 ಚಮಚ ಎಣ್ಣೆ - 1 ಚಮಚ ಕಡಲೆ ಬೇಳೆ - ಸ್ವಲ್ಪ ಉದ್ದಿನ ಬೇಳೆ - ಸ್ವಲ್ಪ ಸಾಸಿವೆ - ಸ್ವಲ್ಪ ಉಪ್ಪು - ರುಚಿಗೆ ತಕ್ಕಷ್ಟು ಪಾಕ ವಿಧಾನ ಮೂಲಂಗಿ ಸೊಪ್ಪುನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ಉದ್ದುದ್ದವಾಗಿ ಹೆಚ್ಚಿಕೊಳ್ಳಿ. ಒಂದು ಅಗಲ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಟ್ಟು ಅದಕ್ಕೆ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಈರುಳ್ಳಿ ಹಾಕಿ ಕೆಂಪಗೆ ಹುರಿಯಿರಿ. ನಂತರ ಹೆಚ್ಚಿದ ಮೂಲಂಗಿ ಸೊಪ್ಪು, ಅಚ್ಚ ಮೆಣಸಿನ ಪುಡಿ, ಉಪ್ಪು ಹಾಕಿ ಕೆದಕಿ ಮುಚ್ಚಿಡಿ. ಐದೇ ನಿಮಿಷದ ನಂತರ ಕೆಳಗಿಳಿಸಿ.