ಅಕ್ಕಿ ತೊಳೆದು ಹುಡಿ ಹುಡಿಯಾಗಿ ಅನ್ನ ತಯಾರಿಸಿ (ಅನ್ನ ಗಟ್ಟಿಯಾಗಿರಲಿ), ತುಪ್ಪ ಕರಗಿಸಿ ದ್ರಾಕ್ಷಿ, ಗೋಡಂಬಿ ಹುರಿಯಿರಿ. ಎಣ್ಣೆ ಕಾಯಿಸಿ ಜೀರಿಗೆ ಹಾಕಿ ಸಿಡಿಸಿ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ಹುರಿಯಿರಿ. ಗಸಗಸೆ, ತೆಂಗು, ಧನಿಯಾ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ರುಬ್ಬಿಕೊಳ್ಳಿ. ಒಗ್ಗರಣೆಗೆ ಈರುಳ್ಳಿ ಸೇರಿಸಿ ಹಸಿವಾಸನೆ ಹೋಗುವಂತೆ ಹುರಿದು ರುಬ್ಬಿದ ಮಸಾಲೆ ಹಾಕಿ ಒಂದು ನಿಮಿಷ ಹುರಿದು ಮೊಸರು ಸೇರಿಸಿ, ಉಪ್ಪು ಬೆರೆಸಿ, ನಿಂಬೆರಸ ಸೇರಿಸಿ, ಕಲಸಿ. ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ಅನ್ನ ಹರಡಿ ಅದರ ಮೇಲೆ ಮಸಾಲೆ (ಹುರಿದಿಟ್ಟಿರುವ) ಹರಡಿ ಮಾವಿನ ಹೋಳುಗಳನ್ನು ಸ್ವಲ್ಪ ಹರಡಿ ನಂತರ ಇದರ ಮೇಲೆ ಮತ್ತೆ ಅನ್ನ ಹರಡಿ. ಹೀಗೆ ಎಲ್ಲಾ ಪದಾರ್ಥಗಳನ್ನು ಪದರ ಪದರವಾಗಿ ಹರಡಿ ಕೊನೆಯಲ್ಲಿ ಅನ್ನದ ಮೇಲೆ ಗೋಡಂಬಿ-ದ್ರಾಕ್ಷಿಗಳನ್ನು ಹರಡಿ. ಓವನ್ನಿನಲ್ಲಿ ಇಟ್ಟು ಅರ್ಧ ಗಂಟೆ ಬೇಯಿಸಿ. ಓವನ್ ಇಲ್ಲದವರು ಕುಕ್ಕರಿನಲ್ಲಿ ಒಂದು ಸೀಟಿ ಕೂಗಿಸಿ. ಕೊತ್ತಂಬರಿಯಿಂದ ಅಲಂಕರಿಸಿ, ಬಡಿಸುವಾಗ ಮೇಲಿನ ಪದಾರ್ಥದಿಂದ ಹಿಡಿದ ಪಾತ್ರೆಯ ತಳದವರೆಗೆ ಎಲ್ಲಾ ಪದಾರ್ಥಗಳು ಸಿಗುವಂತೆ ಬಡಿಸುವ ಕೈಯಿಂದ ತೆಗೆದು ಬಡಿಸಿ.