ಕ್ಯಾರೆಟ್ ತುಂಡುಗಳು - 1 ಕಪ್ ಮಾವಿನಕಾಯಿ - 1 ಸಣ್ಣ ತುಂಡು ಹಸಿಮೆಣಸಿನಕಾಯಿ - 6 ನೀರುಳ್ಳಿ - 8 ಶುಂಠಿ - ಸಣ್ಣ ತುಂಡು ಉಪ್ಪು - ರುಚಿಗೆ ತಕ್ಕಷ್ಟು ಸಾಸಿವೆ - 1 ಚಮಚ ಕೆಂಪು ಮೆಣಸು - 3 ತೆಂಗನಎಣ್ಣೆ - 1 ಚಮಚ
ಪಾಕ ವಿಧಾನ:
ಕ್ಯಾರೆಟ್ಗೆ ಉಪ್ಪು, ಹಸಿಮೆಣಸಿನಕಾಯಿ, ನೀರುಳ್ಳಿ, ಶುಂಠಿ, ಮಾವಿನಕಾಯಿ ಸೇರಿಸಿ ಚೆನ್ನಾಗಿ ರುಬ್ಬಿ. ನಂತರ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ ಹಾಕಿ. ಅದು ಸಿಡಿದ ನಂತರ ಕೆಂಪುಮೆಣಸು ಹಾಕಿ ಹೊಂಬಣ್ಣ ಬಂದ ನಂತರ ಅದನ್ನು ರುಬ್ಬಿದ ಮಿಶ್ರಣಕ್ಕೆ ಹಾಕಿ. ಅನ್ನ, ದೋಸೆಯೊಂದಿಗೆ ತಿನ್ನಬಹುದು.