ಬೇಕಾಗುವ ಸಾಮಾಗ್ರಿಗಳು: ಕಡಲೆಬೇಳೆ, ಹಸಿಕೊಬ್ಬರಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಸಾಸಿವೆ, ಹುಳಿ ಮೊಸರು, ತರಕಾರಿ
ಮಾಡುವ ವಿಧಾನ: ನೀರಿನಲ್ಲಿ ನೆನೆಸಿದ ಕಡಲೆಬೇಳೆಗೆ ಜೀರಿಗೆ, ಸಾಸಿವೆ, ಇಂಗು, ಉಪ್ಪು, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕಾಯಿತುರಿ, ಅರಶಿನ ಎಲ್ಲವನ್ನು ರುಬ್ಬಿಕೊಳ್ಳಿ. ತರಕಾರಿ ಬೇಯಿಸಿ ಒಗ್ಗರಣೆಯಲ್ಲಿ ಬಾಡಿಸಿರಿ. ಮಿಕ್ಸಿಯಿಂದ ಮಿಶ್ರಣವನ್ನು ತೆಗೆದು ಬೆಂದ ತರಕಾರಿಯೊಡನೆ ಬೆರೆಸಿ ಸ್ವಲ್ಪ ಕಾಲ ಬೇಯಿಸಿ. ಮೊಸರನ್ನು ಕಡೆದು ತರಕಾರಿ ಪಾತ್ರೆಗೆ ಹಾಕಿ ಕುದಿಸಿ.