ಬೇಕಾಗುವ ಸಾಮಗ್ರಿ: 2 ಟೀಚಮಚ ಬೆಲ್ಲ, ಅರ್ಧ ಟೀಚಮಚ ಮೆಣಸಿನ ಪುಡಿ, ಅರ್ಧ ಟೀಚಮಚ ಜೀರಿಗೆ ಪುಡಿ, ಒಂದು ದೊಡ್ಡ ಲಿಂಬೆ ಹಣ್ಣಿನ ಗಾತ್ರದಷ್ಟು ಹುಣಸೆಹಣ್ಣಿನ ಪೇಸ್ಟ್, 4-5 ಬೀಜ ತೆಗೆದ ಖರ್ಜೂರ.
ಮಾಡುವ ವಿಧಾನ: ಅರ್ಧ ಕಪ್ ಖರ್ಜೂರವನ್ನು ಬಿಸಿನೀರಿನಲ್ಲಿ 10ರಿಂದ 15 ನಿಮಿಷ ನೆನೆಹಾಕಿ. ನಂತರ ಹುಣಸೆಹಣ್ಣಿನ ಪೇಸ್ಟ್, ಬೆಲ್ಲವನ್ನು ಸೇರಿಸಿ ಒಲೆಮೇಲಿಡಿ. ಖರ್ಜೂರ ಮೆದುವಾಗುವವರೆಗೆ ಹಾಗೂ ಬೆಲ್ಲ ಕರಗುವವರೆಗೆ ಹಾಗೆಯೇ ಬಿಡಿ. ನಂತರ ಈ ಮಿಶ್ರಣವನ್ನು ಚೆನ್ನಾಗಿ ಹದಬರುವ ಹಾಗೆ ರುಬ್ಬಿ. ಅದಕ್ಕೆ ಮೆಣಸಿನ ಪುಡಿ ಹಾಗೂ ಜೀರಿಗೆ ಪುಡಿ ಸೇರಿಸಿ. ನಂತರ ಮಿಶ್ರಣ ಸರಿಯಾಗಲು ಒಂದೆರಡು ನಿಮಿಷ ಒಲೆ ಮೇಲಿಡಿ. ಹುಣಸೇ ಚಟ್ನಿ ಸಿದ್ಧ. ಇದು ಚಾಟ್, ಸಮೋಸಾ ಜತೆ ಸವಿಯಲು ಚೆನ್ನಾಗಿರುತ್ತದೆ.