ಗರ್ಬಿಣಿಯರು ಮಾಂಸಾಹಾರ ಸೇವಿಸಬಾರದು, ಗರ್ಬ ಧರಿಸಿದ ನಂತರ ಕೈಂಗಿಕ ಕ್ರಿಯೆಯಲ್ಲಿ ತೊಡಗಬಾರದು, ಕೆಟ್ಟ ಸಹವಾಸ ಮಾಡಬಾರದು, ಆಧ್ಯಾತ್ಮ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು. ಕೊಠಡಿಯಲ್ಲಿ ಆರೋಗ್ಯವಂತ ಮಗುವಿನ ಸುಂದರ ಚಿತ್ರ ಅಂಟಿಸಿಕೊಂಡಿರಬೇಕು; ಇದು ಮಗುವಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು, ಪ್ರಶಾಂತ ಪರಿಸರದಲ್ಲಿ ಸಜ್ಜನರ ಸಹವಾಸದಲ್ಲಿರಬೇಕು, ಮಾಹಾತ್ಮರ ಜೀವನ ಚರಿತ್ರೆ ಓದಬೇಕು, ಕಾಮ, ಕ್ರೋಧ, ಮೋಹ, ಭೋಗಾಪೇಕ್ಷೆಯಿಂದ ದೂರವಿರಬೇಕು, ಸಮಾಧಾನ ಚಿತ್ತದಿಂದಿರಬೇಕು ಎಂಬ ಸಲಹೆ ನೀಡಲಾಗಿದೆ. ಇವುಗಳಲ್ಲಿ ಕೆಲವು ಅವೈಜ್ನಾನಿಕ ಹಾಗೂ ರುಜುವಾತಾಗದ ಅಂಶವಾಗಿದೆ ಎಂದು ಹಲವು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.