ನೌಕಾಸನ ಅಭ್ಯಾಸಿಸುವ ವೇಳೆ ದೇಹವು ದೋಣಿಯಾಕಾರಕ್ಕೆ ಪರಿವರ್ತನೆಯಾಗುವುದರಿಂದ ಇದಕ್ಕೆ ನೌಕಾಸನ ಎಂಬ ಹೆಸರು. 'ನೌಕಾ' ಎಂದರೆ ಸಂಸ್ಕೃತದಲ್ಲಿ ದೋಣಿ ಎಂಬರ್ಥ.
ಕೆಲವೇ ಬದಲಾವಣೆಗಳನ್ನು ಹೊರತು ಪಡಿಸಿದರೆ, ನೌಕಾಸನದ ತಂತ್ರಗಳು ಊರ್ಧ್ವ ಪಾದ ಹಸ್ತಾಸನದಂತೆಯೆ.
ವಿಧಾನ ನೆಲದ ಮೇಲೆ ಅಂಗಾತ ಮಲಗಿ. ಊರ್ಧ್ವಪಾದ ಹಸ್ತಾಸನದಲ್ಲಿ ಇರಿಸುವಂತೆ ನೌಕಾಸನದಲ್ಲಿ ನೀವು ನಿಮ್ಮ ಕೈಗಳನ್ನು ತೊಡೆಗಳ ಮೇಲಿಡುವ ಅವಶ್ಯಕತೆ ಇಲ್ಲ. ಬದಲಿಗೆ
WD
ಹಸ್ತಗಳನ್ನು ತಲೆಯ ಮೇಲಕ್ಕೆ ಚಾಚಿ. ನಿಮ್ಮ ತೋಳುಗಳು ಕಿವಿಯನ್ನು ಸವರುತ್ತಿರಬೇಕು. ನಿಧಾನಕ್ಕೆ ಉಸಿರನ್ನು ಒಳಗೆಳೆದುಕೊಳ್ಳುತ್ತಾ, ನಿಮ್ಮ ಕಾಲುಗಳು, ಭುಜ, ಮುಂಡ, ಕತ್ತು ಮತ್ತು ಕೈಗಳನ್ನು ನೆಲದಿಂದ 60 ಡಿಗ್ರಿ ಕೋನಕ್ಕೆ ಮೇಲಕ್ಕೆತ್ತಿ. ಕೈಗಳನ್ನು ನೇರವಾಗಿಸಿ. ನಿಮ್ಮ ಕೈಗಳು ನಿಮ್ಮ ಕಾಲ್ಬೆರಳುಗಳಿಗೆ ಸಮಾನಾಂತರವಾಗಿರಬೇಕು. ಕಾಲ್ಬೆರಳ ತುದಿಗಳು ಕೈ ಬೆರಳ ತುದಿಗಳಿಗೆ ಸಮನಾಂತರವಾಗಿರಬೇಕು. ದೃಷ್ಟಿಯನ್ನು ಕಾಲ್ಬೆರಳ ಮೇಲೆ ಕೇಂದ್ರೀಕರಿಸಿ. ದೇಹವು ನಿಮ್ಮ ಪಿರ್ರೆಗಳಿಗೆ ಸಮತೋಲಿತವಾಗಿರಬೇಕು. ಉಸಿರನ್ನು ತಡೆಹಿಡಿಯಿರಿ. ಈ ಭಂಗಿಯಲ್ಲಿ ಐದು ಸೆಕುಂಡುಗಳ ಕಾಲ ಇರಿ. ಈ ಭಂಗಿಯಲ್ಲಿ ದೇಹವು ದೋಣಿಯಾಕಾರಕ್ಕೆ ಬರುವುದು. ನಿಧಾನಕ್ಕೆ ಉಸಿರನ್ನು ಹೊರಕ್ಕೆ ಬಿಡುತ್ತಾ ಮೊದಲಿನ ಸ್ಥಿತಿಗೆ ಬನ್ನಿ.
ಅನುಕೂಲಗಳು ಕಿಬ್ಬೊಟ್ಟೆ, ಬೆನ್ನು, ಕತ್ತು ಮತ್ತು ದೇಹದ ಕೆಳಗಿನ ಅಂಗಾಂಗಗಳನ್ನು ಬಲಗೊಳಿಸುತ್ತದೆ. ನಿಮ್ಮ ಶ್ವಾಸಕೋಶ ಮತ್ತು ಎದೆಯನ್ನು ವಿಸ್ತರಿಸುತ್ತದೆ ಮತ್ತು ಸುದೃಢವಾಗಿಸುತ್ತದೆ. ಅಂತೆಯೆ, ಪೆಲ್ವಿಕ್ ಪ್ರದೇಶ, ಪಾದಗಳು, ಮೊಣಕಾಲುಗಳು, ತೊಡೆ, ಕೈ ಮತ್ತು ನಿತಂಬಗಳಿಗೆ ಉತ್ತಮ ವ್ಯಾಯಾಮ ನೀಡುತ್ತದೆ.