ಬ್ರಹ್ಮಮುದ್ರೆ

ಪದ್ಮಾಸನ, ಸುಖಾಸನ, ವಜ್ರಾಸನ ಮೊದಲಾದ ಯೋಗಕ್ಕೆ ಸಂಬಂಧಿಸಿದ ಯಾವುದೇ ಆಸನದಲ್ಲಿ ಕುಳಿತುಕೊಳ್ಳಿ. ಆರಾಮ ಸ್ಥಿತಿಯಲ್ಲಿ ಅಥವಾ ಕುರ್ಚಿಯಲ್ಲಿ ಕುಳಿತುಕೊಂಡೂ ಇದನ್ನು ಮಾಡಬಹುದು. ಅಂಗೈಗಳು ಕಟಿಭಾಗದಲ್ಲಿರಲಿ.

ವಿಧಾನ

ದೇಹ ಮತ್ತು ಭುಜ ಸ್ಥಿರವಾಗಿರಲಿ, ಕುತ್ತಿಗೆ ಮಾತ್ರವೇ ತಿರುಗಿಸುವ ಮೂಲಕ ಮುಖವನ್ನು ಬಲಕ್ಕೆ ತಿರುಗಿಸಿ. ಈ ಪ್ರಕ್ರಿಯೆಯಲ್ಲಿ ಗಲ್ಲವು ಬಲಭುಜಕ್ಕೆ ಸಾಧ್ಯವಿದ್ದಷ್ಟು ತಾಗುವಂತಿರಬೇಕು. ನಿಮ್ಮ ದೃಷ್ಟಿಯೂ ಬಲದಿಕ್ಕಿಗಿರಬೇಕು. ಮೂರರಿಂದ ಐದುಬಾರಿ ಉಸಿರಾಟ ಮಾಡುವಷ್ಟು ಕಾಲ ಈ ಸ್ಥಿತಿಯಲ್ಲಿದ್ದು, ಬಳಿಕ ಆರಂಭಿಕ ಸ್ಥಿತಿಗೆ ಮರಳಿ. ನಂತರ, ಇದೇ ರೀತಿಯಾಗಿ, ಮುಖವನ್ನು ಎಡಕ್ಕೆ ತಿರುಗಿಸಿ, ಎಡ ಭುಜದ ನೇರವಾಗಿರುವಂತೆ ನೋಡಿಕೊಳ್ಳಿ, ಎಡದಿಕ್ಕಿಗೇ ದೃಷ್ಟಿ ಇರಲಿ. ಮೂರರಿಂದ ಐದು ಬಾರಿ ಉಸಿರಾಟ ಮಾಡಿದ ಬಳಿಕ ನಿಧಾನವಾಗಿ ಪ್ರಾರಂಭದ ಸ್ಥಿತಿಗೆ ಬನ್ನಿ.
WD


ಈಗ ಕುತ್ತಿಗೆಯ ಸ್ನಾಯುಗಳನ್ನು ಸಡಿಲಗೊಳಿಸಿ, ತಲೆಯನ್ನು ಹಿಂದಕ್ಕೆ ಚಾಚಿರಿ. ಸಾಧ್ಯವಿದ್ದಷ್ಟೂ ಕತ್ತನ್ನು ಕೆಳಗೆ ಬಾಗಿಸಿ. ದೃಷ್ಟಿಯನ್ನು ಹುಬ್ಬಿನತ್ತ ನೇರವಾಗಿಸಿ. ಮೂರರಿಂದ ಐದು ಉಸಿರಾಟದಷ್ಟು ಅವಧಿ ಇದೇ ಸ್ಥಿತಿಯಲ್ಲಿದ್ದು, ಬಳಿಕ ನಿಧಾನವಾಗಿ ಪ್ರಾರಂಭಿಕ ಸ್ಥಿತಿಗೆ ಬನ್ನಿ.

ಈ ಮುದ್ರೆಯನ್ನು, ಮೊದಲು ತಲೆಯನ್ನು ಹಿಂದಕ್ಕೆ ಬಾಗಿಸಿ, ನಂತರ ಮುಖವನ್ನು ಬಲಕ್ಕೆ ಹಾಗೂ ಎಡಕ್ಕೆ ತಿರುಗಿಸುವ ಮೂಲಕವೂ ಮಾಡಬಹುದು. ಎಲ್ಲಾ ನಾಲ್ಕು ಚಲನೆಗಳು ಒಟ್ಟಾಗಿ ಬ್ರಹ್ಮಮುದ್ರೆ ಎಂದು ಕರೆಸಿಕೊಳ್ಳುತ್ತವೆ.

ಉಸಿರಾಟ: ಬ್ರಹ್ಮ ಮುದ್ರೆಯ ಮೂರನೇ ಹಂತದಲ್ಲಿ ತಲೆಯನ್ನು ಹಿಂದಕ್ಕೆ ಬಾಗಿಸಿದಾಗ ಮತ್ತು ನಾಲ್ಕನೇ ಹಂತದಲ್ಲಿ ಗಲ್ಲವನ್ನು ಎದೆಭಾಗದತ್ತ ಕೆಳಗೆ ಮಾಡಿದಾಗ, ಉಸಿರಾಟ ಸ್ಥಗಿತವಾಗುವುದರಿಂದ, ಈ ಸ್ಥಿತಿಗಳಲ್ಲಿ ಎಚ್ಚರಿಕೆಯಿಂದ ಉಸಿರಾಡಿ.

ಕಣ್ಣು ಮತ್ತು ಚಿತ್ತ: ಮುದ್ರೆ ಮಾಡುವುದು ಮತ್ತು ಮುದ್ರೆಯಿಂದ ಹಿಂದಕ್ಕೆ ಬರುವ ಕ್ರಿಯೆಯಲ್ಲಿ ವಿವರಿಸಿದಂತೆ, ಮುಖ ಯಾವ ಭಾಗದತ್ತ ತಿರುಗುತ್ತದೆಯೋ, ಅದೇ ದಿಕ್ಕಿನಲ್ಲಿ ನಿಮ್ಮ ದೃಷ್ಟಿಯೂ ಇರಲಿ.

ಎಚ್ಚರಿಕೆ:

* ಬ್ರಹ್ಮಮುದ್ರೆಯನ್ನು ಸ್ವತಂತ್ರವಾಗಿ ಮಾಡಬೇಕು, ಮತ್ತು ಮುದ್ರೆಯ ಪ್ರತಿ ಹಂತದಲ್ಲೂ 3ರಿಂದ 5 ಉಸಿರಾಟಗಳಷ್ಟು ಅಂತರವಿರಬೇಕು ಹಾಗೂ 3ರಿಂದ 5 ಸುತ್ತಿನಲ್ಲಿ ಇದನ್ನು ಮಾಡಬೇಕು.

* ಗಂಟಲು ಸ್ನಾಯು ತುಂಬಾ ಗಟ್ಟಿಯಾಗಿದ್ದರೆ, ಕುತ್ತಿಗೆ ಮುಂದೆ ಚಾಚುವ ಹಂತವನ್ನು ಮಾಡದೆಯೇ ಮುದ್ರೆ ಮಾಡಿ.

ಬ್ರಹ್ಮಮುದ್ರೆಯ ಪ್ರಯೋಜನಗಳು:

* ಕುತ್ತಿಗೆಯ ಸ್ನಾಯುಗಳ ಸಂಕುಚನ ಮತ್ತು ವಿಕಸನದಿಂದ ಅದು ಬಲಿಷ್ಠವಾಗುತ್ತದೆ ಮತ್ತು ಬಾಗುವಿಕೆ ಸುಲಭವಾಗುತ್ತದೆ.

* ಕತ್ತು, ಗಂಟಲು ಭಾಗದಲ್ಲಿ ರಕ್ತದ ಚಲನೆ ನಿರಾಳವಾಗುತ್ತದೆ. ಮೆದುಳಿನಿಂದ ದೇಹದ ಸ್ಪರ್ಶೇಂದ್ರಿಯಗಳಿಗೆ (ಕಣ್ಣು, ಕಿವಿ, ಮೂಗು, ನಾಲಿಗೆ ಇತ್ಯಾದಿ) ಹೋಗುವ ಕ್ರೇನಿಯಲ್ ನರಗಳು ಚೈತನ್ಯ ಪಡೆಯುತ್ತವೆ.

* ಟಾನ್ಸಿಲ್ ಬಾವು, ಉರಿತ ಮತ್ತು ಅನಾರೋಗ್ಯಕರ ಬೆಳವಣಿಗೆಗೆ ಇದು ತಡೆಯೊಡ್ಡುತ್ತದೆ.

ವೆಬ್ದುನಿಯಾವನ್ನು ಓದಿ