ಪ್ರಧಾನಿ ಮೋದಿಗೆ ಸಿಎಂ ಕುಮಾರಸ್ವಾಮಿ ಕೊಟ್ಟ ಗಿಫ್ಟ್ ಏನು ಗೊತ್ತಾ?

ಮಂಗಳವಾರ, 11 ಸೆಪ್ಟಂಬರ್ 2018 (09:46 IST)
ನವದೆಹಲಿ: ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ವಿವರಣೆ ನೀಡಿ ಕೇಂದ್ರದ ನೆರವು ಕೇಳಲು ಹೋಗಿದ್ದ ಸಿಎಂ ಕುಮಾರಸ್ವಾಮಿ ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ.

ರಾಜ್ಯದ ನಿಯೋಗದ ಜತೆಗೆ ಹೋಗಿದ್ದ ಸಿಎಂ ಕುಮಾರಸ್ವಾಮಿ ಪ್ರಧಾನಿ ಮೋದಿಗೆ ರಾಜ್ಯದ ನೆರೆ ಪೀಡಿತ ಪ್ರದೇಶಗಳ ಕುರಿತು ಮನದಟ್ಟು ಮಾಡಿದರಲ್ಲದೆ 2000 ಕೋಟಿ ರೂ. ನೆರವಿನ ಪ್ಯಾಕೇಜ್ ನೀಡುವಂತೆಯೂ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯದ ನಿಯೋಗವನ್ನು ಆತ್ಮೀಯವಾಗಿ ಬರಮಾಡಿಕೊಂಡ ಪ್ರಧಾನಿ ಮೋದಿ ವಿಶೇಷವಾಗಿ ಎಚ್ ಡಿ ದೇವೇಗೌಡರ ಜತೆಗೆ ಹಾಸ್ಯ ಚಟಾಕಿ ಹಾರಿಸಿದರು. ಪ್ರಧಾನಿ ಭೇಟಿ ಬಳಿಕ ಸಿಎಂ ಕುಮಾರಸ್ವಾಮಿ ಉಡುಗೊರೆಯಾಗಿ ಪುಸ್ತಕವೊಂದನ್ನು ನೀಡಿದರು. ಖ್ಯಾತ ಪ್ರವಾಸಿ ಲೇಖಕ ಡ್ಯಾಮ್ ಮೊರೇಸ್ ಬರೆದ ಕರ್ನಾಟಕದ ಬಗೆಗೆ ವಿವರ ನೀಡುವ ‘ದಿ ಓಪನ್ ಐಸ್: ಎ ಜರ್ನಿ ಥ್ರೂ ಕರ್ನಾಟಕ’ ಎಂಬ ಪುಸ್ತಕವನ್ನು ಸಿಎಂ ಎಚ್ ಡಿಕೆ ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಈ ಮೊದಲೇ ಪ್ರಧಾನಿ ಮೋದಿ ತಮ್ಮನ್ನು ಭೇಟಿಯಾಗುವವರು ಉಡುಗೊರೆ ನೀಡಬೇಕೆಂದಿದ್ದರೆ ಬೇರೇನೋ ನೀಡಿ ಹಣ ಪೋಲು ಮಾಡುವ ಬದಲು ಪುಸ್ತಕ ಅಥವಾ ಒಂದು ಗುಲಾಬಿ ಹೂ ನೀಡಿದರೆ ಸಾಕು ಎಂದಿದ್ದರು. ಅದರಂತೆ ಸಿಎಂ ಎಚ್ ಡಿಕೆ ಅಮೂಲ್ಯವಾದ ಉಡುಗೊರೆಯನ್ನೇ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ