ಭಾರತ್ ಬಂಧ್ ಗೆ ಮೋದಿ ಅಭಿಮಾನಿಗಳ ತಿರುಗೇಟು
ಇಂದು ಬಂದ್ ಆಚರಿಸುವ ಬದಲು ಹೆಚ್ಚುವರಿಯಾಗಿ ಒಂದು ಗಂಟೆ ಕೆಲಸ ಮಾಡುವುದಾಗಿ ಕೆಲವು ಮೋದಿ ಅಭಿಮಾನಿಗಳ ಅಂಗಡಿ, ಹೋಟೆಲ್ ಮತ್ತಿತರ ಮಳಿಗೆಗಳ ಮಾಲಿಕರು ತಮ್ಮ ಅಂಗಡಿ ಎದುರು ಫಲಕ ಹಾಕಿ ಭಾರತ್ ಬಂಧ್ ಗೆ ತಿರುಗೇಟು ಕೊಟ್ಟಿದ್ದಾರೆ.
ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಬಿಜೆಪಿ ಬೆಂಬಲಿಗರು ಇದಕ್ಕೆ ವ್ಯಾಪಕ ಪ್ರಚಾರ ಕೊಟ್ಟಿದ್ದು, ಆ ಮೂಲಕ ತಾವು ಬಂದ್ ಗೆ ಬೆಂಬಲ ಕೊಡಲ್ಲ ಎಂದು ಸಾಂಕೇತಿಕವಾಗಿ ತಿರುಗೇಟು ಕೊಟ್ಟಿದ್ದಾರೆ.