ಅಜಿಂಕ್ಯಾ ರಹಾನೆ; ಭಾರತೀಯ ಕ್ರಿಕೆಟ್‌ನ ಮುಂದಿನ ಸೆಹ್ವಾಗ್?

ಶುಕ್ರವಾರ, 2 ಸೆಪ್ಟಂಬರ್ 2011 (14:23 IST)
ಭಾರತದಲ್ಲಿ ಹೊಸ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಅಂತಹ ಪ್ರತಿಭಾವಂತರನ್ನು ಪತ್ತೆ ಹಚ್ಚುವುದೇ ಬಹುದೊಡ್ಡ ಸವಾಲಾಗಿದೆ. ಇದಕ್ಕೊಂದು ನೂತನ ನಿದರ್ಶನವೆಂದರೆ ಮುಂಬೈನ ಆರಂಭಿಕ ಬ್ಯಾಟ್ಸ್‌ಮನ್ ಅಜಿಂಕ್ಯಾ ರಹಾನೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

PTI
ಇಂಗ್ಲೆಂಡ್ ವಿರುದ್ಧದ ತಮ್ಮ ಚೊಚ್ಚಲ ಟ್ವೆಂಟಿ-20 ಪಂದ್ಯದಲ್ಲಿಯೇ ಬಿರುಸಿನ ಅರ್ಧಶತಕ ಬಾರಿಸುವ ಗಮನ ಸೆಳೆದಿದ್ದ ರಹಾನೆ ಇದೀ ಕ್ರಿಕೆಟ್ ತಜ್ಞರ ಚರ್ಚೆಗೆ ಕಾರಣವಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಆಕರ್ಷಕ ಇನ್ನಿಂಗ್ಸ್‌ನಿಂದಾಗಿಯೇ ಈ ಮುಂಬೈ ಆಟಗಾರ ಮೇಲೆ ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದ್ದು, ಭವಿಷ್ಯದಲ್ಲಿ ಸೆಹ್ವಾಗ್ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲರು ಎಂಬ ಅಭಿಪ್ರಾಯ ಕೇಳಿಬರುತ್ತಿವೆ.

ಬಿರುಸಿನ ಹೊಡೆತಕ್ಕೂ, ದ್ರಾವಿಡ್‌ರಂತಹ ರಕ್ಷಣಾತ್ಮಕ ಆಟಕ್ಕೂ ಸೈ ಎನಿಸಿಕೊಂಡಿರುವುದೇ ರಹಾನೆ ಅವರ ಪ್ಲಸ್ ಪಾಯಿಂಟ್. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಆರಂಭವೊದಗಿಸಿದ್ದ ರಹಾನೆ ಒಂದು ಬೌಂಡರಿ ಬಾರಿಸಿ ನಂತರದ ಎಸೆತದಲ್ಲಿ ಸಿಂಗಲ್‌ಗಾಗಿ ಯತ್ನಿಸುತ್ತಿದ್ದರು. ಆ ಮೂಲಕ ಸ್ಟೈಕ್ ಬದಲಾಯಿಸುವ ಅವರ ಕಾರ್ಯ ತಂತ್ರವೇ ಮಹಾನ್ ಆಟಗಾರನ ಎಲ್ಲ ಲಕ್ಷ್ಮಣಗಳನ್ನು ಎತ್ತಿ ತೋರಿಸುತ್ತಿವೆ.

ರಹಾನೆ ಆಗಮನ ತಡವಾಯಿತೇ..?
ಇಷ್ಟೆಲ್ಲ ಪ್ರತಿಭೆಗಳನ್ನು ಹೊಂದಿದ್ದರೂ ರಹಾನೆ ಅವರನ್ನು ಬೆಳಕಿಗೆ ತರುವಲ್ಲಿ ಆಯ್ಕೆ ಸಮಿತಿ ತುಂಬಾನೇ ತಡ ಮಾಡಿದೆಯೆಂಬ ಅಪವಾದವೂ ಕೇಳಿ ಬರುತ್ತಿವೆ. 38 ಹರೆಯದ ಈ ಮುಂಬೈ ಬ್ಯಾಟ್ಸ್‌ಮನ್ ಈಗಾಗಲೇ ಪ್ರಥಮ ದರ್ಜೆಯ 48 ಪಂದ್ಯಗಳಲ್ಲಿ 67.72ರ ಸರಾಸರಿಯಲ್ಲಿ 4673 ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕ ಹಾಗೂ 18 ಅರ್ಧಶತಕಗಳು ಸೇರಿವೆ. ಅವರ ಗರಿಷ್ಠ ಮೊತ್ತ 265* ಆಗಿದ್ದು, ಆ ಮೂಲಕ ದೀರ್ಘ ಪ್ರಕಾರದ ಆಟಕ್ಕೂ ಸೈ ಎನಿಸಿಕೊಂಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಮೊದಲ ಮೂರು ಆವೃತ್ತಿಗಳಲ್ಲಿ ತವರಿನ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ರಹಾನೆ ಇದೀಗ ರಾಜಸ್ತಾನ ರಾಯಲ್ಸ್ ತಂಡದ ಪರ ಆಡುತ್ತಿದ್ದಾರೆ. ಈ ಹಿಂದೆ ಮುಂಬೈಗೆ 38ನೇ ಬಾರಿ ರಣಜಿ ಟ್ರೋಫಿ ಗೆಲ್ಲಿಸಿಕೊಡುವಲ್ಲಿಯೂ ರಹಾನೆ ಪಾತ್ರ ಮಹತ್ವದ್ದಾಗಿತ್ತು. ಆ ಆವೃತ್ತಿಯೊಂದರಲ್ಲೇ ರಹಾನೆ ಅವರು 1089 ರನ್ ಗಳಿಸಿದ್ದರು.

ತಮ್ಮ ಅಮೋಘ ಬ್ಯಾಟಿನಿಂದಾಗಿಯೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಂದಲೇ ಶ್ಲಾಘನೆಗೆ ಪಾತ್ರರಾಗಿರುವ ರಹಾನೆ, ಟೀಮ್ ಇಂಡಿಯಾದಿಂದ ಕರೆ ಲಭಿಸುವ ಮೊದಲು ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಉದಯೋನ್ಮುಖ ಕ್ರಿಕೆಟಿಗರ ಟೂರ್ನಮೆಂಟ್‌ನಲ್ಲಿ ಎರಡು ಶತಕಗಳ ಸಾಧನೆಯನ್ನು ಮಾಡಿದ್ದರು.

ಒಟ್ಟಾರೆಯಾಗಿ ಟೀಮ್ ಇಂಡಿಯಾದ ಹೊಸ ಆಶಾಕಿರಣವಾಗಿರುವ ರಹಾನೆ ತಮ್ಮ ಸಾಮರ್ಥ್ಯ ತಕ್ಕಂತೆ ಆಡಿದ್ದಲ್ಲಿ ಭವಿಷ್ಯದಲ್ಲಿ ಸೆಹ್ವಾಗ್ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲರು ಎಂಬುದರಲ್ಲಿ ಎರಡು ಮಾತಿಲ್ಲ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ