ಆರು ಕೋಟಿಗೆ ಧೋನಿ ಹರಾಜು

ಬುಧವಾರ, 20 ಫೆಬ್ರವರಿ 2008 (12:56 IST)
ಮುಂಬೈನ ಓಬೆರಾಯ್ ಹಿಲ್ಟನ್ ಹೋಟೆಲಿನಲ್ಲಿ ನಡೆದಿರುವ ಇಂಡಿಯನ್ ಪ್ರಿಮಿಯರ್ ಕ್ರಿಕೆಟ್ ಲೀಗ್ ಟೂರ್ನಿಯ ಕ್ರಿಕೆಟಿಗರ ಹರಾಜಿನಲ್ಲಿ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ಚೆನ್ನೈ ತಂಡವು ಆರು ಕೋಟಿ ರೂಗಳನ್ನು ನೀಡಿ ಖರೀದಿಸಿದೆ.

ಮೊದಲ ಸುತ್ತಿನ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ತಂಡವು ಮಹೇಂದ್ರ ಸಿಂಗ್ ಧೋನಿಗೆ ಆರು ಕೋಟಿ ಮೊತ್ತವನ್ನು ನೀಡಲು ಸಿದ್ಧ ಎಂದು ಘೋಷಿಸಿ, ಬಿರುಸಿನ ಹೊಡೆತಗಳಿಗೆ ಹೆಸರಾದ ಮಹೇಂದ್ರ ಸಿಂಗ್ ಧೋನಿಯನ್ನು ತಮ್ಮ ಪರ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಎಂಟು ತಂಡಗಳ ಮಾಲಿಕರು 78 ಕ್ರಿಕೆಟಿಗರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು. ಅಂದಾಜು 160 ಕೋಟಿ ರೂಗಳು ಹರಾಜಿನ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಪಾವತಿಯಾಗುವ ನಿರೀಕ್ಷೆ ಇದೆ.

ಇಂಡಿಯನ್ ಪ್ರಿಮಿಯರ್ ಲೀಗ್‌ಗೆ ಆಘಾತವಾಗುವಂತಹ ಬೆಳವಣಿಗೆಯೊಂದು ಘಟಿಸಿದ್ದು, ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕ ರಿಕಿ ಪಾಂಟಿಂಗ್, ಆಂಡ್ರ್ಯೂ ಸೈಮಂಡ್ಸ್, ಬ್ರೆಟ್ ಲೀ ಮತ್ತು ಮೈಕ್ ಹಸ್ಸಿ ಎಪ್ರಿಲ್ 18 ರಿಂದ ಪ್ರಾರಂಭವಾಗುವ ಐಪಿಎಲ್ ಟ್ವೆಂಟಿ 20 ಕ್ರಿಕೆಟ್ ಲೀಗ್‌ನಲ್ಲಿ ಆಡುತ್ತಿಲ್ಲ. ಆದ್ದರಿಂದ ಅವರ ಹೆಸರುಗಳನ್ನು ಹರಾಜು ಪ್ರಕ್ರಿಯೆಯಿಂದ ಕೈಬಿಡಲಾಗಿದೆ.

ವೆಬ್ದುನಿಯಾವನ್ನು ಓದಿ