ನಾನು ಟೀಕೆಗಳಿಗೆ ಲಕ್ಷ್ಯ ಕೊಡುವುದಿಲ್ಲ : ಸಚಿನ್

ಬುಧವಾರ, 3 ಜೂನ್ 2009 (15:59 IST)
ಕಳೆದ ವರ್ಷ ಹಿರಿಯ ಆಟಗಾರರು ತಮ್ಮ ಬಗ್ಗೆ ಟೀಕೆಗಳನ್ನು ಮಾಡಿದ್ದರೂ ಅಂತಹ ಟೀಕೆಗಳಿಗೆ ಲಕ್ಷ್ಯ ತಾವು ಕೊಡುವುದಿಲ್ಲ ಎಂದು ಖ್ಯಾತ ಬ್ಯಾಟ್ಸ್ ಮೆನ್‌ ಸಚಿನ್ ತೆಂಡೂಲ್ಕರ್ ‌ ಹೇಳಿದ್ದಾರೆ.

ಜನರಿಗೆ ತಮ್ಮದೇ ಆದಂತಹ ಅಭಿಪ್ರಾಯಗಳಿರುತ್ತವೆ. ಆದರೆ ಅವರ ಅಭಿಪ್ರಾಯಗಳು ಸೂಕ್ತ ಎಂದರ್ಥವಲ್ಲ. ಅವುಗಳು ಕೇವಲ ಅಭಿಪ್ರಾಯಗಳು .ಆದರೆ ನನಗೆ ಸಾಧಿಸಬೇಕಾಗಿರುವುದು ತುಂಬಾ ಇದೆ .ಕೆಲವರಿಗೆ ನಮ್ಮನ್ನು ಟೀಕಿಸುವುದು ಅವರಿಗೆ ಸಂತೋಷ ತರುತ್ತದೆ.. ಆದರೆ ಟೀಕೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದು ಸಚಿನ್ ತಿಳಿಸಿದ್ದಾರೆ.

ಕಳೆದ ವರ್ಷ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹಿರಿಯ ಆಟದಾರರು ಕಳಪೆ ಪ್ರದರ್ಶನದಿಂದ ಟೀಕೆಗಳಿಗೆ ಒಳಗಾದಾಗ ಅವರ ರಕ್ಷಣೆಗೆ ಧಾವಿಸಿದ್ದ ಸಚಿನ್, ಹಿರಿಯ ಆಟಗಾರರು ಕ್ರಿಕೆಟ್ ಜಗತ್ತಿಗೆ ಅಮೋಘ ಸೇವೆಸಲ್ಲಿಸಿದ್ದು ಅವರನ್ನು ಗುರುತಿಸಿ ಗೌರವಿಸುವುದು ಅಗತ್ಯವಾಗಿದೆ ಎಂದು ಹೇಳಿಕೆ ನೀಡಿದ್ದರು..

ಯಶಸ್ಸು ಅಕಸ್ಮಿಕವಾಗಿ ಬರುವುದಿಲ್ಲ ನಾನು ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲು ಹಗಲಿರಳು ಶ್ರಮಿಸಿದ್ದರಿಂದ ಸಫಲತೆ ಪಡೆದಿದ್ದೇನೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ .

ವೆಬ್ದುನಿಯಾವನ್ನು ಓದಿ