ಸಿಎಬಿ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರವಿಲ್ಲ :ಗಂಗೂಲಿ

ಶನಿವಾರ, 11 ಜುಲೈ 2009 (13:06 IST)
PTI
ಬಂಗಾಳ ಕ್ರಿಕೆಟ್‌ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಉಹಾಪೋಹ ವರದಿಗಳನ್ನು ತಳ್ಳಿಹಾಕಿದ ಸೌರವ್ ಗಂಗೂಲಿ , ಕ್ರಿಕೆಟ್ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇಲ್ಲಿಯವರೆಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ , ಗಾಡಫಾದರ್ ದಾಲ್ಮಿಯಾ ವಿರುದ್ಧ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎನ್ನುವ ವರದಿಗಳನ್ನು ಗಂಗೂಲಿ ತಳ್ಳಿಹಾಕಿದ್ದಾರೆ.

,ನಾನು ಸರಳವಾಗಿ ಕ್ರಿಕೆಟ್ ಮಂಡಳಿಯಲ್ಲಿ ಸೇರಲು ಬಯಸಿದ್ದೇನೆ ಎಂದು ಹೇಳಿಕೆ ನೀಡಿದ್ದೆ. ಪ್ರತಿನಿತ್ಯ ಹೇಳಿಕೆಗಳು ಪ್ರಕಟವಾಗುತ್ತವೆ. ಆದರೆ ಇತ್ತೀಚಿನ ಉಹಾಪೋಹ ವರದಿಗಳ ಬಗ್ಗೆ ಗಂಗೂಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಉಹಾಪೋಹ ವರದಿಗಳು ಸೃಷ್ಟಿಸಿದ ಕಥೆಗಳು. ಇದರಲ್ಲಿ ಸತ್ಯಾಂಶವಿಲ್ಲ. ನಾನು ಇನ್ನೂ ಕ್ರಿಕೆಟ್ ಮಂಡಳಿಗೆ ಸೇರ್ಪಡೆಯಾಗಿಲ್ಲ. ಆದರೆ ಜನರು 2014ರ ಬಿಸಿಸಿಐ ಅಧ್ಯಕ್ಷ ಸ್ಥಾನದ ಬಗ್ಗೆ ವಿಚಾರ ಮಾಡುತ್ತಾರೆ. ಚುನಾವಣೆಗಾಗಿ ಹೋರಾಟ ನಡೆಸುವುದಲ್ಲ .ಕ್ರಿಕೆಟಿಗರಿಗೆ ಸಹಾಯ ಮಾಡುವ ಆಸಕ್ತಿಯನ್ನು ಹೊಂದಿದ್ದೇನೆ. ನಾನು ಯಾವ ಹುದ್ದೆಯಲ್ಲಿದ್ದರೆ ಕ್ರಿಕೆಟಿಗರಿಗೆ ಸಹಾಯವಾಗುತ್ತದೆ ಎನ್ನುವ ಚಿಂತನೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಸೌರವ್ ಗಂಗೂಲಿ ಪ್ರಸಕ್ತ ವರ್ಷದ ಚುನಾವಣೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿಲ್ಲ. ಆದರೆ ಮುಂದಿನ ವರ್ಷದಲ್ಲಿ ಸ್ಪರ್ಧಿಸುವ ಬಲವಾದ ಸಾಧ್ಯತೆಗಳಿವೆ ಎಂದು ಗಂಗೂಲಿ ಸಹೋದರ ಸ್ನೇಹಶಿಶ್ ಹೇಳಿದ್ದಾರೆ.

ಆದರೆ, ದಾಲ್ಮಿಯಾ ಅವರ ವಿರುದ್ಧ ಸ್ಪರ್ಧಿಸಲು ಅಗತ್ಯವಾಗಿರುವ ಸಂಖ್ಯಾಬಲ, ಸೌರವ್ ಗಂಗೂಲಿಯವರಿಗಿಲ್ಲ ಎಂದು ದಾಲ್ಮಿಯಾ ಬೆಂಬಲಿಗರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ