ಪಬ್‌ನಲ್ಲಿ ಜಗಳ ನಡೆದಿಲ್ಲ: ನೆಹ್ರಾ ಸ್ಪಷ್ಟನೆ

ಶನಿವಾರ, 15 ಮೇ 2010 (16:38 IST)
ಟ್ವೆಂಟಿ-20 ವಿಶ್ವಕಪ್ ವೈಫಲ್ಯದ ಬೆನ್ನಲ್ಲಿಯೇ ಭಾರತೀಯ ಕ್ರಿಕೆಟಿಗರು ವೆಸ್ಟ್‌ಇಂಡೀಸ್‌‍ನ ಸ್ಥಳೀಯ ಪಬ್‌ವೊಂದರಲ್ಲಿ ಬೀದಿ ಜಗಳಕ್ಕಿಳಿದಿದ್ದರು ಎಂಬ ಮಾಧ್ಯಮಗಳ ವರದಿಗಳನ್ನು ವೇಗಿ ಆಶಿಶ್ ನೆಹ್ರಾ ತಳ್ಳಿ ಹಾಕಿದ್ದು, ಇಂತಹ ಯಾವುದೇ ಘಟನೆ ನಡೆದಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

ನಮ್ಮಲ್ಲಿ ಯಾರೂ ಏನನ್ನು ಹೇಳಿಲ್ಲ. ವಿಶ್ವದದ್ಯಾಂತ ಅಸಂಖ್ಯಾತ ಅಭಿಮಾನಿಗಳಿದ್ದು, ಆದರೆ ಏನು ನಡೆದಿಲ್ಲ ಎಂದವರು ಹೇಳಿದರು.

ನಾವಲ್ಲಿಗೆ ಸಂಜೆಯ ಊಟಕ್ಕಾಗಿ ತೆರಳಿದ್ದೆವು. ಅಲ್ಲದೆ ಆಸ್ಟೇಲಿಯಾ ಮತ್ತು ವೆಸ್ಟ್‌ಇಂಡೀಸ್ ನಡುವಣ ಪಂದ್ಯವನ್ನು ವೀಕ್ಷಿಸಿದೆವು. ಮಿಕ್ಕ ವಿಷಯಗಳೆಲ್ಲಾ ಇದೀಗಷ್ಟೇ ಕೇಳುತ್ತಿದ್ದೇನೆ ಎಂದವರು ಹೇಳಿದರು.

ವರದಿಯ ಪ್ರಕಾರ ಬುಧವಾರ ರಾತ್ರಿ ಆರು ಭಾರತೀಯ ಆಟಗಾರರು ವಿಂಡೀಸ್‌ನ ಪಬ್‌‍ವೊಂದಕ್ಕೆ ತೆರಳಿ ಜಗಳಕ್ಕೆ ನಿಂತಿದ್ದಾರೆ. ಇದರಲ್ಲಿ ಆಶಿಶ್ ನೆಹ್ರಾ ಕೂಡಾ ಭಾಗೀಯಾಗಿದ್ದರೆಂದು ಆಪಾದಿಸಲಾಗಿತ್ತು.

ವರದಿಗಳನ್ನು ಭಾರತ ತಂಡದ ಮ್ಯಾನೇಜರ್ ರಣಜಿಬ್ ಬಿಸ್ವಾಲ್ ಕೂಡಾ ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಾಯಕನಿಗೆ ಬೆಂಬಲ...
ವಿಶ್ವಕಪ್‌ನಲ್ಲಿ ಎದುರಾದ ಹಿನ್ನೆಡೆಯ ನಂತರ ತೀವ್ರ ಒತ್ತಡದ ಪರಿಸ್ಥಿತಿ ಎದುರಿಸುತ್ತಿರುವ ನಾಯಕ ಮಹೇಂದ್ರ ಸಿಂಗ್ ಧೋನಿಗೆ ನೆಹ್ರಾ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಹಿ ಕಪ್ತಾನಗಿರಿಯಲ್ಲಿಯೇ ಟೆಸ್ಟ್‌ನಲ್ಲಿ ಅಗ್ರಸ್ಥಾನ ಹಾಗೂ ಏಕದಿನದಲ್ಲಿ ದ್ವಿತೀಯ ಸ್ಥಾನಕ್ಕೇರಿರುವ ವಿಚಾರವನ್ನು ನಾವು ಮರೆಯಬಾರದು. ಕಳೆದ 18 ತಿಂಗಳ ಅವಧಿಯಲ್ಲಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ಹಾಗಾಗಿ ಕೇವಲ ಒಂದೆರೆಡು ಟ್ವೆಂಟಿ-20 ಪಂದ್ಯಗಳ ನಿರ್ವಹಣೆಯನ್ನು ಗಮನಿಸಿ ಈ ಅವಧಿಯ ಕಠಿಣ ಪ್ರಯತ್ನವನ್ನು ಹಾಳು ಮಾಡಬಾರದು ಎಂದವರು ಹೇಳಿದರು.

ನಾವು ಕೇವಲ ಒಬ್ಬರನ್ನು ನೆಚ್ಚಿಕೊಂಡು ಪಂದ್ಯ ಗೆಲ್ಲುತ್ತಿಲ್ಲ. ಅಲ್ಲದೆ ನಾಯಕನಾಗಿ ಧೋನಿ ಏನು ಸಾಧಿಸಿದ್ದಾರೆಂಬುದು ಎಲ್ಲರಿಗೂ ಗೊತ್ತು ಎಂದವರು ಹೇಳಿದರು.

ಐಪಿಎಲ್‌ಗೂ ಸಾಥ್...
ತಂಡದ ಹೀನಾಯ ಪ್ರದರ್ಶನಕ್ಕೆ ಐಪಿಎಲ್ ಕಾರಣ ಎಂಬ ವಾದವನ್ನು ಅಶಿಶ್ ನೆಹ್ರಾ ತಳ್ಳಿ ಹಾಕಿದರು. ನನಗೆ ಸಂಬಂಧಿಸಿ ಐಪಿಎಲ್ ಉತ್ತಮ ಟೂರ್ನಿ. ಇದರಿಂದಾಗಿ ನಾನು ತಂಡಕ್ಕೆ ಮರು ಪ್ರವೇಶ ಮಾಡಿದ್ದೇನೆ ಎಂದವರು ಹೇಳಿದರು.

ವೆಬ್ದುನಿಯಾವನ್ನು ಓದಿ