ಟ್ವೆಂಟಿ-20 ವಿಶ್ವಕಪ್ ಆಶಷ್‌ನಷ್ಟೇ ಮಹತ್ವದಾಗಿದೆ: ಕಾಲಿಂಗ್‌ವುಡ್

ಸೋಮವಾರ, 17 ಮೇ 2010 (12:08 IST)
ಚೊಚ್ಚಲ ಐಸಿಸಿ ಪ್ರಮುಖ ಟೂರ್ನಿಯೊಂದನ್ನು ಮುಡಿಗೇರಿಸಿದ ನಂತರ ಪ್ರತ್ರಿಕ್ರಿಯೆ ನೀಡಿರುವ ಇಂಗ್ಲೆಂಡ್ ನಾಯಕ ಪಾಲ್ ಕಾಲಿಂಗ್‌ವುಡ್, ಟ್ವೆಂಟಿ-20 ವಿಶ್ವಕಪ್ ಆಶಷ್ ಸರಣಿ ಗೆಲುವಿನಷ್ಟೇ ಮಹತ್ವದಾಗಿದೆ ಎಂದು ಹೇಳಿದ್ದಾರೆ.

ನಮಗಿದು ಚೊಚ್ಚಲ ವಿಶ್ವಕಪ್ ಜಯವಾಗಿದ್ದು, ಆದ್ದರಿಂದ ನಿಜವಾಗಿಯೂ ನಾವಿದಕ್ಕೆ ಅರ್ಹರಾಗಿದ್ದೇವೆ ಎಂದವರು ಹೇಳಿದರು.

ನಮ್ಮ ತಂಡದಲ್ಲಿ ಅತ್ಯುತ್ತಮ ಆಟಗಾರರು ಇದ್ದಾರೆ. ಪ್ರಸಕ್ತ ವರ್ಷದಲ್ಲಿ ನಾವು ಕಠಿಣ ಯತ್ನ ನಡೆಸಿದ್ದೆವು. ಅದರ ಫಲ ಇದೀಗ ದಕ್ಕಿದೆ ಎಂದವರು ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ದಾಖಲಿಸಿದ ಏಳು ವಿಕೆಟುಗಳ ಭರ್ಜರಿ ಜಯದ ನಂತರ ನುಡಿದರು.

ಎದುರಾಳಿ ತಂಡದ ಮೂರು ವಿಕೆಟುಗಳನ್ನು ಬಹುಬೇಗನೇ ಪಡೆದಾಗ ಚಾಂಪಿಯನ್ ಆಗುವ ದೊಡ್ಡ ಅವಕಾಶವಿದೆ ಎಂಬ ವಿಶ್ವಾಸ ಮೂಡಿ ಬಂತು ಎಂದವರು ಆಟದ ರೋಚಕತೆ ಬಗ್ಗೆ ವಿವರಿಸಿದರು.

ಮತ್ತೊಂದೆಡೆ ಆಂಗ್ಲರ ಪಡೆಯು ಎಲ್ಲಾ ವಿಭಾಗದಲ್ಲಿಯೂ ತಮ್ಮನ್ನು ಮೀರಿ ನಿಂತಿತು ಎಂದು ಆಸ್ಟ್ರೇಲಿಯಾದ ನಾಯಕ ಮೈಕಲ್ ಕ್ಲಾರ್ಕ್ ಹೇಳಿದರು.

ನಮ್ಮ ಮೊತ್ತ ಉತ್ತಮವಾಗಿರಲಿಲ್ಲ. ಇಂಗ್ಲೆಂಡ್ ನಿಜಕ್ಕೂ ಉತ್ತಮ ಕ್ರಿಕೆಟ್ ಆಡಿತು. ಆದ್ದರಿಂದ ಗೆಲುವಿನ ಪೂರ್ಣ ಶ್ರೇಯಸ್ಸು ಕಾಲಿಂಗ್‌ವುಡ್ ಪಡೆಗೆ ಸಲ್ಲುತ್ತದೆ ಎಂದವರು ನಿರಾಸೆಯಿಂದ ನುಡಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವೆಬ್ದುನಿಯಾವನ್ನು ಓದಿ