ಪುರಷರ ಹಿನ್ನೆಡೆ ಸರಿದೂಗಿಸಿದ ಆಸೀಸ್ ವನಿತೆಯರು ಚಾಂಪಿಯನ್

ಸೋಮವಾರ, 17 ಮೇ 2010 (12:36 IST)
ಟ್ವೆಂಟಿ-20 ವಿಶ್ವಕಪ್‌ನ ಪುರುಷರ ವಿಭಾಗದಲ್ಲಿ ಆಸ್ಟ್ರೇಲಿಯಾ ನಿರಾಸೆ ಅನುಭವಿಸಿರಬಹುದು. ಆದರೆ ಮಹಿಳಾ ವಿಶ್ವಕಪ್ ಗೆದ್ದುಕೊಳ್ಳುವ ಮೂಲಕ ಈ ಹಿನ್ನಡೆಯನ್ನು ಕಾಂಗರೂ ವನಿತಾ ತಂಡ ಸರಿದೂಗಿಸಿದೆ.

ಭಾನುವಾರ ನಡೆದ ಫೈನಲ್‌ನಲ್ಲಿ ಸಾಂಪ್ರಾದಾಯಿಕ ಬದ್ಧ ಎದುರಾಳಿ ನ್ಯೂಜಿಲೆಂಡ್ ತಂಡವನ್ನು ಮೂರು ರನ್ನುಗಳಿಂದ ರೋಚಕವಾಗಿ ಮಣಿಸಿರುವ ಆಸ್ಟ್ರೇಲಿಯಾ ವನಿತಾ ತಂಡ ಪ್ರಶಸ್ತಿಗೆ ಮುತ್ತಿಕ್ಕಿದೆ.

ಸೆಮಿಫೈನಲ್‌ನಲ್ಲಿ ಭಾರತೀಯ ಮಹಿಳಾ ತಂಡಕ್ಕೂ ಸೋಲಿನ ರುಚಿ ತೋರಿಸಿ ಕೊಟ್ಟಿದ್ದ ಆಸೀಸ್‌ಗೆ ಫೈನಲ್‌ನಲ್ಲಿ ಕಿವೀಸ್‌ನಿಂದ ಜಿದ್ದಾಜಿದ್ದಿನ ಪೈಪೋಟಿ ಎದುರಾಗಿತ್ತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಆಸೀಸ್ ನಿಗದಿತ ಓವರುಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 106 ರನ್ನುಗಳ ಸಾಧಾರಣ ಮೊತ್ತ ಪೇರಿಸಿತ್ತು. ಆದರೆ ಆಸೀಸ್‌ನ ಕರಾರುವಕ್ ದಾಳಿ ಮುಂದೆ ಎಡವಿದ ಕಿವೀಸ್ 20 ಓವರುಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 103 ರನ್ ಗಳಿಸುಲಷ್ಟೇ ಶಕ್ತವಾಗಿತ್ತು.

ಕೊನೆಯ ಓವರ್‌ನಲ್ಲಿ ಕಿವೀಸ್ ಗೆಲುವಿಗೆ 14 ರನ್ನಿನ ಅಗತ್ಯವಿತ್ತು. ಆದರೆ ಪರಿಣಾಮಕಾಗಿ ದಾಳಿ ಸಂಘಟಿಸಿದ ಆಸೀಸ್ ಬೌಲರುಗಳು ಕಿವೀಸ್ ದಾಂಡಿಗರನ್ನು ಕಟ್ಟಿಹಾಕುವಲ್ಲಿ ಸಫಲರಾದರು.

ಪ್ರಭಾವಿ ದಾಳಿ ಸಂಘಟಿಸಿದ ಎ. ಪೆರ್ರಿ ಆಸೀಸ್ ಪರ ಮೂರು ವಿಕೆಟ್ ಪಡೆದಿದ್ದರಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರಾದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವೆಬ್ದುನಿಯಾವನ್ನು ಓದಿ