ಅಶೋಕ್ ದಿಂಡಾಗೆ 'ವರ್ಷದ ಕ್ರಿಕೆಟಿಗ' ಪ್ರಶಸ್ತಿ ಗೌರವ

ಮಂಗಳವಾರ, 13 ಜುಲೈ 2010 (12:49 IST)
ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ನ (ಸಿಎಬಿ) 'ವರ್ಷದ ಕ್ರಿಕೆಟಿಗ' ಪ್ರಶಸ್ತಿಗೆ ಉದಯೋನ್ಮುಖ ವೇಗದ ಬೌಲರ್ ಅಶೋಕ್ ದಿಂಡಾ ಪಾತ್ರರಾಗಿದ್ದಾರೆ.

ಇದೇ ವೇಳೆ ಮಾಜಿ ಬ್ಯಾಟ್ಸ್‌ಮನ್ ಪ್ರಕಾಶ್ ಪೊಡ್ಡಾರ್ 'ಜೀವಮಾನ ಪ್ರಶಸ್ತಿ' ಗೌರವಕ್ಕೆ ಪಾತ್ರರಾಗಿದ್ದಾರೆ. ಮಾಜಿ ಬಂಗಾಳ ಆಟಗಾರರಾಗಿರುವ ಪ್ರಕಾಶ್ 1960-1977ರ ಅವಧಿಯಲ್ಲಿ 39 ಪಂದ್ಯಗಳಲ್ಲಿ 44.57ರ ಸರಾಸರಿಯಲ್ಲಿ ಒಟ್ಟು 2095 ರನ್ ಗಳಿಸಿದ್ದರು. 74 ಪ್ರಥಮ ದರ್ಜೆ ಕ್ರಿಕೆಟನ್ನು ಆಡಿರುವ ಅವರು 11 ಶತಕಗಳ ನೆರವನಿಂದ 3868 ರನ್ ಗಳಿಸಿದ್ದರು.

ಭಾರತ ಮಹಿಳಾ ತಂಡದ ನಾಯಕಿ ಜೂಲನ್ ಗೋಸ್ವಾಮಿಗೆ 'ಹಿರಿಯ ಮಹಿಳಾ ಆಟಗಾರ್ತಿ' ಮತ್ತು ಸುದೀಪ್ ಚಟಾರ್ಜಿಗೆ 2009-10 ಅವಧಿಯ ಅಂಡರ್-19 ವಿಭಾಗದ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಪ್ರಶಸ್ತಿ ಪಟ್ಟಿ:
ವರ್ಷದ ಕ್ರಿಕೆಟಿಗ: ಅಶೋಕ್ ದಿಂಡಾ
ಸಭ್ಯ ಕ್ರಿಕೆಟಿಗ: ರೋಹಾನ್ ಬ್ಯಾನರ್ಜಿ
ಅತ್ಯುತ್ತಮ ವೇಗದ ಬೌಲರ್: ರಣದಿಬ್ ಬೋಸ್
ಅತ್ಯುತ್ತಮ ಅಂಡರ್-22 ಕ್ರಿಕೆಟಿಗ: ಶ್ರೀವಾಸ್ತವ್ ಗೋಸ್ವಾಮಿ
ಜೀವಮಾನ ಸಾಧನೆ: ಪ್ರಕಾಶ್ ಪೊಡ್ಡಾರ್
ಹಿರಿಯ ಮಹಿಳಾ ಆಟಗಾರ್ತಿ: ಜೂಲಾನ್ ಗೋಸ್ವಾಮಿ
ಅಂಡರ್-19 ಆಟಗಾರ: ಸುದೀಪ್ ಚಟಾರ್ಜಿ
ಅಂಡರ್-19 ಮಹಿಳಾ ಆಟಗಾರ್ತಿ: ನೆಹಾ ಮಾಜಿ
ಅಂಪಾಯರ್ (ಬಿಸಿಸಿಐ ಪಾನೆಲ್): ಅಲೋಕ್ ಬಟ್ಟಾಚಾರ್ಯ

ವೆಬ್ದುನಿಯಾವನ್ನು ಓದಿ