ನಾಗ್ಪುರದಲ್ಲಿ ಸಚಿನ್ ಟೆಸ್ಟ್ ಶತಕಗಳ ಫಿಫ್ಟಿ, ದ್ರಾವಿಡ್ 200 ಕ್ಯಾಚ್?

ಗುರುವಾರ, 18 ನವೆಂಬರ್ 2010 (17:29 IST)
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಶತಕಗಳ ಅರ್ಧಶತಕಗಳ ಐತಿಹಾಸಿಕ ಸಾಧನೆಯ ಅಪೂರ್ವ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲೇ ಈ ಶತಕ ದಾಖಲಾಗಲಿದೆ ಎಂಬ ಅಪಾರ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ಅಹಮದಾಬಾದ್ ಮತ್ತು ಹೈದರಾಬಾದ್ ಟೆಸ್ಟ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಸಚಿನ್ ಇಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದ್ದಾರೆ. ಹಾಗೆಯೇ ತಮ್ಮ ಈ ಸಾಧನೆಗಿಂತ ನ್ಯೂಜಿಲೆಂಡ್ ವಿರುದ್ಧದ ಸರಣಿ ಜಯವೇ ಪ್ರಾಮುಖ್ಯವಾಗಿದೆ ಎಂದು ಲಿಟ್ಲ್ ಮಾಸ್ಟರ್ ನುಡಿದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 49ನೇ ಶತಕ ಸಿಡಿಸಿದ್ದ ಸಚಿನ್, ಟೆಸ್ಟ್‌ನಲ್ಲಿ ಶತಕಗಳ ಅರ್ಧಶತಕ ತಲುಪಲು ಇನ್ನು ಒಂದು ಶತಕದ ಅಗತ್ಯವಿದೆ. ಪ್ರಸಕ್ತ ಋತುವಿನಿಲ್ಲಿ ಅಮೋಘ ಫಾರ್ಮ್‌ನಲ್ಲಿರುವ 37ರ ಹರೆಯದ ಸಚಿನ್, ವಿದರ್ಭ ಕ್ರಿಕೆಟ್ ಅಸೋಸಿಯೇಷನ್‌ನ ಈ ಮೈದಾನದಲ್ಲಿ ಐತಿಹಾಸಿಕ ಸಾಧನೆ ಮಾಡುವ ಹೊಸ್ತಿಲಲ್ಲಿದ್ದಾರೆ.

ಅದೇ ರೀತಿ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆಯ 199 ಕ್ಯಾಚ್ ಪಡೆದಿರುವ ರಾಹುಲ್ ದ್ರಾವಿಡ್ ಕೂಡಾ ಇದೇ ಪಂದ್ಯದಲ್ಲಿ ಕ್ಯಾಚುಗಳ ದ್ವಿಶತಕ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವೆಬ್ದುನಿಯಾವನ್ನು ಓದಿ