ಜೈಪುರ ಏಕದಿನ; ಸವಾಲಿನ ಮೊತ್ತ ಪೇರಿಸಿದ ಕಿವೀಸ್

ಬುಧವಾರ, 1 ಡಿಸೆಂಬರ್ 2010 (18:23 IST)
ಜೈಪುರ ಏಕದಿನ; ಕನ್ನಡ ಲೈವ್ ಸ್ಕೋರ್ ಬೋರ್ಡ್‌ಗಾಗಿ ಇಲ್ಲಿ ಕ್ಲಿಕ್ಕಿಸಿ...

ಇಲ್ಲಿ ಆತಿಥೇಯ ಭಾರತ ತಂಡದ ವಿರುದ್ಧ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿರುವ ಪ್ರವಾಸಿ ನ್ಯೂಜಿಲೆಂಡ್ ತಂಡವು ನಿಗದಿತ 50 ಓವರುಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 258 ರನ್ ಪೇರಿಸಿದೆ.

ಆಕರ್ಷಕ ಅರ್ಧಶತಕ ದಾಖಲಿಸಿದ ಮಾರ್ಟಿನ್ ಗುಪ್ಟಿಲ್ ಮತ್ತು ಸ್ಕಾಟ್ ಸ್ಟೈರಿಸ್ ನೆರವಿನಿಂದ ಸವಾಲಿನ ಮೊತ್ತ ಪೇರಿಸುವಲ್ಲಿ ಕಿವೀಸ್ ಯಶಸ್ವಿಯಾಗಿದೆ. ಒಂದು ಹಂತದಲ್ಲಿ ಕಿವೀಸ್ 250ರ ಗಡಿ ದಾಟುವುದು ಕಷ್ಟವೆನಿಸಿದರೂ ನಾಯಕ ಡ್ಯಾನಿಯಲ್ ವಿಟ್ಟೋರಿ ಸೇರಿದಂತೆ ಕೆಳ ಕ್ರಮಾಂಕದ ಆಟಗಾರರು ಉಪಯುಕ್ತ ನೆರವು ನೀಡುವ ಮೂಲಕ ತಂಡಕ್ಕೆ ನೆರವಾದರು.

ಜೆಮ್ಮಿ ಹೌ (5), ಕೇನೆ ವಿಲಿಯಮ್ಸನ್ (29) ಮತ್ತು ರಾಸ್ ಟೇಲರ್ (15) ವಿಕೆಟುಗಳನ್ನು 100ರೊಳಗೆ ಕಳೆದುಕೊಂಡ ಕಿವೀಸ್ ಹಿನ್ನೆಡೆ ಅನುಭವಿಸಿತ್ತು. ಆದರೆ ನಿಧಾನವಾಗಿ ಇನ್ನಿಂಗ್ಸ್ ಬೆಳೆಸಿದ ಆರಂಭಿಕ ಗುಪ್ಟಿಲ್ ಮತ್ತು ಸ್ಕಾಟ್ ಸ್ಟೈರಿಸ್ ನಾಲ್ಕನೇ ವಿಕೆಟ್‌ಗೆ 65 ರನ್ನುಗಳ ಮಹತ್ವದ ಜತೆಯಾಟ ನೀಡುವ ಮೂಲಕ ನೆರವಾದರು.

102 ಎಸೆತಗಳನ್ನು ಎದುರಿಸಿದ ಗುಪ್ಟಿಲ್ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 70 ರನ್ ಗಳಿಸಿದರು. ಅದೇ ರೀತಿ ಸ್ವಲ್ಪ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಸ್ಟೈರಿಸ್ 56 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದರು.

ಕೊನೆಯ ಹಂತದಲ್ಲಿ 31 ರನ್ ಗಳಿಸಿದ ನಾಯಕ ವೆಟ್ಟೋರಿ ತಂಡದ ಮೊತ್ತ 250ರ ಗಡಿ ದಾಟಿಸುವಲ್ಲಿ ನೆರವಾದರು. ಅದೇ ರೀತಿ ನಥನ್ ಮೆಕಲಮ್ (12), ಕೈಲ್ ಮಿಲ್ಸ್ (13) ಮತ್ತು ಹಾಪ್ಕಿನ್ಸ್ (11*) ಉಪಯಕ್ತ ನೆರವು ನೀಡಿದರು.

47 ರನ್ ತೆತ್ತು ನಾಲ್ಕು ವಿಕೆಟ್ ಕಿತ್ತ ವೇಗಿ ಶ್ರೀಶಾಂತ್ ಭಾರತದ ಪರ ಯಶಸ್ವಿಯ ಬೌಲರ್‌ರೆನಿಸಿಕೊಂಡರು. ಮುನಾಫ್ ಪಟೇಲ್, ಆರ್. ಅಶ್ವಿನ್ ಮತ್ತು ಯೂಸುಫ್ ಪಠಾಣ್ ತಲಾ ಒಂದು ವಿಕೆಟ್ ಕಿತ್ತರು.

ಆಡುವ ಬಳಗ...

ಭಾರತ: ಗೌತಮ್ ಗಂಭೀರ್ (ನಾಯಕ), ಮುರಳಿ ವಿಜಯ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಯೂಸುಫ್ ಪಠಾಣ್, ವೃದ್ದೀಮಾನ್ ಸಹಾ, ಆರ್. ಅಶ್ವಿನ್, ಆಶಿಶ್ ನೆಹ್ರಾ, ಎಸ್. ಶ್ರೀಶಾಂತ್ ಮತ್ತು ಮುನಾಫ್ ಪಟೇಲ್

ನ್ಯೂಜಿಲೆಂಡ್: ಜೆ.ಎಮ್. ಹೌ, ಎಮ್.ಜೆ. ಗುಪ್ಟಿಲ್, ರಾಸ್ ಟೇಲರ್, ಸ್ಟಾಟ್ ಸ್ಟೈರಿಸ್, ಕೆ.ಎಸ್. ವಿಲಿಯಮ್ಸನ್, ಡ್ಯಾನಿಯಲ್ ವಿಟ್ಟೋರಿ, ಜೆ.ಪಿ ಹಾಪ್ಕಿನ್ಸ್, ನಥನ್ ಮೆಕಲಮ್, ಕೈಲ್ ಮಿಲ್ಸ್, ಟಿಮ್ ಸೌಥಿ ಮತ್ತು ಎ.ಜೆ. ಮೆಕ್‌ಕೇ

ವೆಬ್ದುನಿಯಾವನ್ನು ಓದಿ