ಸಚಿನ್ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ರಾಯಭಾರಿ: ಸ್ಮಿತ್

ಮಂಗಳವಾರ, 14 ಡಿಸೆಂಬರ್ 2010 (18:46 IST)
ವಿಶ್ವ ಕ್ರಿಕೆಟ್‌ಗೆ ಸಚಿನ್ ತೆಂಡೂಲ್ಕರ್ 'ಶ್ರೇಷ್ಠ ರಾಯಭಾರಿ' ಎಂದು ದಕ್ಷಿಣ ಆಫ್ರಿಕಾದ ನಾಯಕ ಗ್ರೇಮ್ ಸ್ಮಿತ್ ಅಭಿಪ್ರಾಯಪಟ್ಟಿದ್ದು, ಈ ಬ್ಯಾಟಿಂಗ್ ದಿಗ್ಗಜನ ಆಟವನ್ನು ನೋಡಿದ ಮೇಲೆಯಷ್ಟೇ ಕ್ರಿಕೆಟ್‌ ಆಟಗಾರನಾಗಬೇಕೆಂಬ ಬಯಕೆ ಮೈಗೂಡಿಸಿ ಬಂದಿದ್ದೇನೆ ಎಂದವರು ಹೇಳಿದರು.

ಸ್ಮಿತ್ 11ರ ಹರೆಯದವನಾಗಿದ್ದಾಗ ಸಚಿನ್ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದರು. ಇದೀಗ ಸಚಿನ್ ಅವರು ತಮ್ಮ ಕ್ಯಾರಿಯರ್‌ನ ಕೊನೆಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ.

ಸಚಿನ್ ವಿಶ್ವದ ಕ್ಲಾಸ್ ಆಟಗಾರ. ಅದೇ ರೀತಿ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ರಾಯಭಾರಿ ಎಂದು ಭಾರತೀಯ ಕ್ರಿಕೆಟ್‌ ತಂಡಕ್ಕೆ ಅಧಿಕೃತವಾಗಿ ಏರ್ಪಡಿಸಲಾಗಿದ್ದ ಔತಣಕೂಟದ ಕಾರ್ಯಕ್ರಮದಲ್ಲಿ ಸ್ಮಿತ್ ನುಡಿದರು.

ನಾನು ಹರೆಯನವನಾಗಿದ್ದಾಗ ಸಚಿನ್ ಆಟವನ್ನು ನೋಡಿದ ಮೇಲಷ್ಟೇ ಕ್ರಿಕೆಟ್ ಕನಸು ಕನಲಾರಂಭಿಸಿದೆ. ಸಚಿನ್ ಆಟವನ್ನು ಟಿ.ವಿ ಪರದೆಯಲ್ಲಿ ವೀಕ್ಷಿಸಿದ ನಾನು ಮುಂದೊಂದು ದಿನ ಅವರಂತೆಯೇ ಉತ್ತಮ ಆಟಗಾರನಾಗುವ ಇರಾದೆ ಹೊಂದಿದ್ದೆ ಎಂದವರು ಹೇಳಿದರು.

ಪ್ರಸಕ್ತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಮೂರು ಟೆಸ್ಟ್, ಏಕೈಕ ಟ್ವೆಂಟಿ-20 ಮತ್ತು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ. ಅದೇ ಹೊತ್ತಿಗೆ ಭಾರತೀಯ ಕೋಚ್ ಗ್ಯಾರಿ ಕರ್ಸ್ಟನ್ ಬಗ್ಗೆಯೂ ನಾಯಕ ಸ್ಮಿತ್ ಹೊಗಳಿಕೆಯ ಮಾತುಗಳನ್ನಾಡಿದರು.

ವೆಬ್ದುನಿಯಾವನ್ನು ಓದಿ