50ನೇ ಟೆಸ್ಟ್ ಶತಕದ ಬಗ್ಗೆ ತಲೆಕೆಡಿಸಿಕೊಂಡಿಲ್ಲ: ಸಚಿನ್

ಗುರುವಾರ, 16 ಡಿಸೆಂಬರ್ 2010 (12:17 IST)
ಐತಿಹಾಸಿಕ 50ನೇ ಟೆಸ್ಟ್ ಶತಕದ ಹೊಸ್ತಿಲಲ್ಲಿರುವ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ತಾನು ಈ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದು ವಿಧಿಗೆ ಬಿಟ್ಟ ವಿಚಾರ. ಆಗುವುದೆಲ್ಲಾ ಆಗಿಯೇ ತೀರುತ್ತದೆ. ನಾನಿದರ ಬಗ್ಗೆ ಹೆಚ್ಚು ತೆಲೆಕೆಡಿಸಿಕೊಂಡಿಲ್ಲ. ನನ್ನ ಗಮನವಂತೂ ಪಂದ್ಯದತ್ತವಾಗಿರುತ್ತದೆ ಎಂದವರು ಹೇಳಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶತಕವೊಂದನ್ನು ಬಾರಿಸಲು ಸಚಿನ್‌ ಅವರಿಗೆ ಸಾಧ್ಯವಾದಲ್ಲಿ ಹೊಸ ಇತಿಹಾಸ ರಚಿಸಲಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ 50 ಟೆಸ್ಟ್ ಶತಕ ದಾಖಲಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂದೆನಿಸಿಕೊಳ್ಳಲಿದ್ದಾರೆ.

ಪಂದ್ಯ ಗೆಲ್ಲುವುದು ಮುಖ್ಯವಾಗಿದೆ. ಹೀಗಾಗಿ ವೈಯಕ್ತಿಕ ದಾಖಲೆ ಮಹತ್ವದಲ್ಲ ಎಂದವರು ಸೇರಿಸಿದರು. ಇಲ್ಲಿನ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವುದು ಅಗತ್ಯವಾಗಿದೆ. ಹಾಗೆಯೇ ಎಲ್ಲ ರೀತಿಯಲ್ಲಿಯೂ ವಿಶ್ವ ನಂ.2 ಟೆಸ್ಟ್ ತಂಡವಾದ ಆತಿಥೇಯ ದಕ್ಷಿಣ ಆಫ್ರಿಕಾದ ಸವಾಲನ್ನು ಸ್ವೀಕರಿಸಲು ಸಜ್ಜಾಗಿದ್ದೇವೆ ಎಂದವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕೋಚ್ ಗ್ಯಾರಿ ಕರ್ಸ್ಟನ್ ಮಾರ್ಗದರ್ಶನದಲ್ಲಿ ನಾವು ಕಠಿಣ ಅಭ್ಯಾಸ ನಡೆಸಿದ್ದೇವೆ. ನಮ್ಮ ಹಾಗೆ ದಕ್ಷಿಣ ಆಫ್ರಿಕಾ ಕೂಡಾ ಕಠಿಣ ತರಬೇತಿ ಪಡೆದಿರುವುದಂತೂ ಖಚಿತ. ಹಾಗಾಗಿ ಸರಣಿ ಕಠಿಣವಾಗಿರಲಿದೆ ಎಂದವರು ಹೇಳಿದರು.

ವೆಬ್ದುನಿಯಾವನ್ನು ಓದಿ