ಕಾಲಿಸ್ ದ್ವಿಶತಕ; ಹರಿಣಗಳಿಗೆ 484 ರನ್ನುಗಳ ಬೃಹತ್ ಮುನ್ನಡೆ

ಶನಿವಾರ, 18 ಡಿಸೆಂಬರ್ 2010 (17:53 IST)
ಭಾರತ-ದಕ್ಷಿಣ ಆಫ್ರಿಕಾ ಸೆಂಚುರಿಯನ್ ಟೆಸ್ಟ್; ಕನ್ನಡ ಲೈವ್ ಸ್ಕೋರ್ ಬೋರ್ಡ್‌ಗಾಗಿ ಇಲ್ಲಿ ಕ್ಲಿಕ್ಕಿಸಿ...

ಜಾಕ್ವಾಸ್ ಕಾಲಿಸ್ ಬಾರಿಸಿದ ಅಮೋಘ ದ್ವಿಶತಕ (201*) ಮತ್ತು ಹಾಶೀಮ್ ಆಮ್ಲಾ (140) ಮತ್ತು ಅಬ್ರಹಾಂ ಡಿ ವಿಲಿಯರ್ಸ್ (129) ದಾಖಲಿಸಿದ ಶತಕಗಳ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಭಾರತ ವಿರುದ್ಧ ಇಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 620 ರನ್ನುಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿದ್ದು, 484 ರನ್ನುಗಳ ಮುನ್ನಡೆ ದಾಖಲಿಸಿದೆ.

ಮೊರ್ನೆ ಮೊರ್ಕೆಲ್ ಮತ್ತು ಡೇಲ್ ಸ್ಟೈನ್ ಮಾರಕ ದಾಳಿಗೆ ಕುಸಿತ ಕಂಡಿದ್ದ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 136 ರನ್ನುಗಳಿಗೆ ಆಲೌಟಾಗಿತ್ತು. ಆದರೆ ಸೆಂಚುರಿಯನ್‌ನಲ್ಲಿ ರನ್ ಹೊಳೆಯನ್ನೇ ಹರಿಸಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಭಾರತೀಯರನ್ನು ಸಾಕಷ್ಟು ಬೆವರಿಳಿಸಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

366/2 ಎಂಬಲ್ಲಿದ್ದ ಮೂರನೇ ದಿನದಾಟ ಮುಂದುವರಿಸಿದ್ದ ಹರಿಣಗಳಿಗೆ ಹಾಶೀಮ್ ಆಮ್ಲಾ ಮತ್ತು ಜಾಕ್ವಾಸ್ ಕಾಲಿಸ್ ಉತ್ತಮ ಆರಂಭವೊದಗಿಸಿದ್ದರು. ಆಮ್ಲಾ 140 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ವಿಪರ್ಯಾಸವೆಂದರೆ ಆಮ್ಲಾ ರನ್ ಮಾತ್ರ ಪರಿಗಣಿಸಿದರೆ ಭಾರತ ಮೂರು ರನ್ನುಗಳ ಹಿನ್ನೆಡೆ ಅನುಭವಿಸುತ್ತದೆ.

ನಂತರ ಕ್ರೀಸಿಗಿಳಿದ ವಿಲಿಯರ್ಸ್ ಭಾರತೀಯ ಬೌಲರುಗಳನ್ನು ಮನಬಂದಂತೆಯೇ ದಂಡಿಸಿದರು. ಕೇವಲ 112 ಎಸೆತಗಳನ್ನು ಎದುರಿಸಿದ ವಿಲಿಯರ್ಸ್ 12 ಬೌಂಡರಿ ಹಾಗೂ ಐದು ಭರ್ಜರಿ ಸಿಕ್ಸರುಗಳ ನೆರವಿನಿಂದ 129 ರನ್ ಗಳಿಸಿದರು.

ಮತ್ತೊಂದು ಬದಿಯಿಂದ ಅಮೋಘ ಬ್ಯಾಟಿಂಗ್ ಮುಂದುವರಿಸಿದ ಕಾಲಿಸ್ ದ್ವಿಶತಕ ದಾಖಲಿಸಿ ಅಜೇಯರಾಗುಳಿದರು. 389 ನಿಮಿಷಗಳ ಕಾಲ ಕ್ರೀಸಿನಲ್ಲಿ ನೆಲೆಯೂರಿ ನಿಂತ ಕಾಲಿಸ್ 270 ಎಸೆತಗಳಲ್ಲಿ 15 ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 201 ರನ್ ಗಳಿಸಿದರು.

ಭಾರತೀಯ ಎಲ್ಲ ಬೌಲರುಗಳು ದುಬಾರಿ ಎನಿಸಿಕೊಂಡರು. ದಿನದಾಟದಲ್ಲಿ ಪತನಗೊಂಡ ಎರಡು ವಿಕೆಟುಗಳನ್ನು ವೇಗಿ ಇಶಾಂತ್ ಶರ್ಮಾ ಪಡೆದುಕೊಂಡರು.

ವೆಬ್ದುನಿಯಾವನ್ನು ಓದಿ