ಟೆಸ್ಟ್‌ನಲ್ಲಿ 12 ಸಾವಿರ ರನ್ ಪೂರ್ಣಗೊಳಿಸಿದ ದ್ರಾವಿಡ್

ಭಾನುವಾರ, 19 ಡಿಸೆಂಬರ್ 2010 (16:37 IST)
ಸೆಂಚುರಿಯನ್ ಟೆಸ್ಟ್; ಕನ್ನಡ ಲೈವ್ ಸ್ಕೋರ್ ಬೋರ್ಡ್‌ಗಾಗಿ ಇಲ್ಲಿ ಕ್ಲಿಕ್ಕಿಸಿ...

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 43 ರನ್ ಗಳಿಸುವ ಮೂಲಕ ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 12,000 ರನ್ ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್‌ನೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯಾ ರಿಕಿ ಪಾಂಟಿಂಗ್ ಈ ಪಟ್ಟಿನಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಷ್ಟೇ ವೆಸ್ಟ್‌ಇಂಡೀಸ್ ದಿಗ್ಗಜ ಬ್ರ್ಯಾನ್ ಲಾರಾ ದಾಖಲೆಯನ್ನು ಮುರಿದಿದ್ದ ದ್ರಾವಿಡ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 43 ರನ್ ಗಳಿಸುವ ಮೂಲಕ ಮತ್ತೊಂದು ಸಾಧನೆ ಮಾಡಿದ್ದಾರೆ.

ಆದರೂ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಸೋಲಿನತ್ತ ಮುಖ ಮಾಡಿದೆ. ಊಟದ ವಿರಾಮದ ಹೊತ್ತಿಗೆ 77.5 ಓವರುಗಳಲ್ಲಿ ಆರು ವಿಕೆಟುಗಳನ್ನು ಕಳೆದುಕೊಂಡಿರುವ ಪ್ರವಾಸಿಗರು 277 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ.

ಇನ್ನಿಂಗ್ಸ್ ಸೋಲು ತಪ್ಪಿಸಲು ಭಾರತಕ್ಕಿನ್ನೂ ನಾಲ್ಕು ವಿಕೆಟ್ ಬಾಕಿ ಉಳಿದಿರುವಂತೆಯೇ 207 ರನ್ ಗಳಿಸಬೇಕಾಗಿದೆ. ಅಜೇಯ 38 ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಮುಂದುವರಿಸಿದ್ದು, 50ನೇ ಟೆಸ್ಟ್ ಶತಕದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ಕಲಾತ್ಮಕ ವಿವಿಎಸ್ ಲಕ್ಷ್ಮಣ್ (8) ಮತ್ತು ಸುರೇಶ್ ರೈನಾ (5) ದ್ವಿತೀಯ ಇನ್ನಿಂಗ್ಸ್‌ನಲ್ಲಿಯೂ ನಿರಾಸೆ ಮೂಡಿಸಿದರು. ಆದರೆ ಎಷ್ಟು ಹೊತ್ತು ದಕ್ಷಿಣ ಆಫ್ರಿಕಾ ಸವಾಲನ್ನು ಭಾರತ ಮೆಟ್ಟಿ ನಿಲ್ಲಲಿದೆಂಬುದನ್ನು ಕಾದು ನೋಡಬೇಕಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ