ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತವು ಆತಿಥೇಯರ ವಿರುದ್ಧದ ಏಕದಿನ ಸರಣಿ ಮತ್ತು ಟ್ವೆಂಟಿ-20 ಪಂದ್ಯಕ್ಕೆ 16 ಆಟಗಾರರ ತಂಡವನ್ನು ಘೋಷಿಸಿದ್ದು, ಸಚಿನ್ ತೆಂಡುಲ್ಕರ್ ಹತ್ತು ತಿಂಗಳ ನಂತರ ಮರಳಿದ್ದರೆ, ಇಶಾಂತ್ ಶರ್ಮಾ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾರಿಗೆ ಖೊಕ್ ನೀಡಲಾಗಿದೆ.
ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಶ್ವಕಪ್-2011 ಕೂಟಕ್ಕೂ ಬಹುತೇಕ ಇದೇ ತಂಡವನ್ನು ಆರಿಸುವ ಸಾಧ್ಯತೆಯೊಂದಿಗೆ, ಈ ಏಕದಿನ ತಂಡಕ್ಕೆ ವಿಶೇಷ ಮಹತ್ವ ದೊರೆತಿದ್ದು, ಪ್ರಯೋಗಾತ್ಮಕವಾಗಿ ಈ ಆಟಗಾರರನ್ನು ಆಡಿಸಲಾಗುತ್ತಿದೆ ಎಂದು ಅಂದಾಜಿಸಲಾಗುತ್ತಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಜನವರಿ 9ರಂದು ಒಂದು ಟ್ವೆಂಟಿ-20 ಪಂದ್ಯ ಹಾಗೂ ಜನವರಿ 12ರಿಂದ ಐದು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಅದರ ವೇಳಾಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ.
ಬೌನ್ಸಿ ಟ್ರ್ಯಾಕ್‌ನಲ್ಲಿ ಸ್ಪಿನ್ನರ್ ಪೀಯೂಷ್ ಚಾವ್ಲಾಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ಉಳಿದಂತೆ ತಂಡ ಇಂತಿದೆ:
ಮಹೇಂದ್ರ ಸಿಂಗ್ ಧೋನಿ (ನಾಯಕ, ವಿಕೆಟ್ ಕೀಪರ್) ವೀರೇಂದ್ರ ಸೆಹ್ವಾಗ್ ಗೌತಮ್ ಗಂಭೀರ್ ಸಚಿನ್ ತೆಂಡುಲ್ಕರ್ ಯುವರಾಜ್ ಸಿಂಗ್ ವಿರಾಟ್ ಕೋಹ್ಲಿ ಸುರೇಶ್ ರೈನಾ ಯೂಸುಫ್ ಪಠಾಣ್ ಜಹೀರ್ ಖಾನ್ ಶ್ರೀಶಾಂತ್ ಆಶಿಷ್ ನೆಹ್ರಾ ಹರಭಜನ್ ಸಿಂಗ್ ಪ್ರವೀಣ್ ಕುಮಾರ್ ಮುನಾಫ್ ಪಟೇಲ್ ಆರ್.ಅಶ್ವಿನ್ ಪೀಯೂಷ್ ಚಾವ್ಲಾ