ಭಾರತಕ್ಕೆ ಸೆಡ್ಡು ನೀಡಲು ಹರಿಣಗಳ ರಣತಂತ್ರ: ಸ್ಮಿತ್

ಶುಕ್ರವಾರ, 24 ಡಿಸೆಂಬರ್ 2010 (13:46 IST)
ಮೊದಲ ಟೆಸ್ಟ್‌ನಲ್ಲಿ ಹೀನಾಯ ಸೋಲಿಗೆ ಒಳಗಾಗಿರುವ ಅನುಭವಿ ಭಾರತ ತಂಡವು ಯಾವುದೇ ಹಂತದಲ್ಲಿಯೂ ತಿರುಗಿಬೀಳುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಚೆನ್ನಾಗಿ ಅರಿತಿರುವ ದಕ್ಷಿಣ ಆಫ್ರಿಕಾ ನಾಯಕ ಗ್ರೇಮ್ ಸ್ಮಿತ್, ಭಾರತದ ಸವಾಲನ್ನು ಎದುರಿಸಲು ಸರ್ವ ಸನ್ನದ್ಧರಾಗಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಮೊದಲ ಟೆಸ್ಟ್‌ನ ಇನ್ನಿಂಗ್ಸ್ ಸೋಲಿನ ನಂತರ ಭಾರತ ಅತ್ಯುತ್ತಮ ಕ್ರಿಕೆಟ್ ಆಡಲು ಯತ್ನಿಸಲಿದೆ. ಅದರಲ್ಲೂ ಬ್ಯಾಟಿಂಗ್ ವಿಭಾಗ ಶ್ರೇಷ್ಠ ಪ್ರದರ್ಶನ ನೀಡಲು ಯತ್ನಿಸಲಿದೆ ಎಂದವರು ಹೇಳಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಭಾರತ ಹಿರಿಯ ಅನುಭವಿ ಆಟಗಾರರನ್ನು ಹೊಂದಿದ್ದು, ತಿರುಗೇಟು ನೀಡುವ ನಿರೀಕ್ಷೆಯಿದೆ. ಆದರೆ ನಾವು ಅನುದಾನವಾಗಿ ಯಾವುದನ್ನು ಪಡೆದಿಲ್ಲ. ಸವಾಲನ್ನು ಎದುರಿಸಲಿದ್ದೇವೆ ಎಂದವರು ಹೇಳಿದರು.

ಮೊದಲ ಟೆಸ್ಟ್‌ನ ಭರ್ಜರಿ ಜಯವು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಹಾಗೆಯೇ ನಾವು ಅಗ್ರಪಟ್ಟದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದೇವೆ. ಮತ್ತೊಂದೆಡೆ ಭಾರತ ಹಿನ್ನೆಡೆ ಅನುಭವಿಸಿದೆ ಎಂದರು.

ಆದರೆ ಡರ್ಬನ್‌ ಮೈದಾನದಲ್ಲಿ ಆಡಿರುವ ಕೊನೆಯ ಎರಡು ಪಂದ್ಯಗಳಲ್ಲಿನ ಫಲಿತಾಂಶದಿಂದ ಆತಿಥೇಯರು ಭೀತಿಗೊಳಗಾಗಿದ್ದಾರೆ. ಒಮ್ಮೆ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಅಂತರದಲ್ಲಿ ಸೋಲುಂಡಿದ್ದ ಹರಿಣಗಳು ನಂತರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು 175 ರನ್ ಅಂತರದಲ್ಲಿ ಕಳೆದುಕೊಂಡಿತ್ತು.

ನಮಗಿದರ ಬಗ್ಗೆ ಪೂರ್ಣ ಅರಿವಿದೆ. ಕೊನೆಯ ಎರಡು ಬಾರಿ ನಾವು ಶ್ರೇಷ್ಠ ಪ್ರದರ್ಶನ ನೀಡಿರಲಿಲ್ಲ. ಆದರೆ ಇಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲಿದ್ದೇವೆ ಎಂದವರು ಹೇಳಿದರು.

ವೆಬ್ದುನಿಯಾವನ್ನು ಓದಿ