ಪ್ರತಿಷ್ಠಿತ ಆಶಸ್ ಸರಣಿಯ ಸಂದರ್ಭದಲ್ಲಿ ಅಂಪೈರ್ ಜತೆ ವಾಗ್ವಾದಕ್ಕಿಳಿದಿದ್ದ ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ ಕೊನೆಗೂ ತಮ್ಮ ವರ್ತನೆಗಾಗಿ ಕ್ಷಮೆಯಾಚಿಸಿದ್ದಾರೆ.
ಮೆಲ್ಬೋರ್ನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಘಟನೆ ನಡೆದಿತ್ತು. ತೀರ್ಪು ಒಂದನ್ನು ಪ್ರಶ್ನಿಸಿದ್ದ ಪಾಂಟಿಂಗ್ ಅವರು ಅಂಪಾಯರ್ ಅಲೀಮ್ ದಾರ್ ಜೊತೆ ಸುಮಾರು ಒಂದು ನಿಮಿಷಕ್ಕೂ ಹೆಚ್ಚು ಹೊತ್ತು ವಾದ ನಡೆಸಿದ್ದರು.
ನನ್ನ ವರ್ತನೆಯಿಂದ ಬೇಸರವಾಗಿದೆ. ಒಬ್ಬ ನಾಯಕನಾಗಿ ಈ ರೀತಿ ವರ್ತಿಸಬಾರದಿತ್ತು ಎಂದವರು ಹೇಳಿದರು. ನಾನು ಮಾಡಿರುವುದು ತಪ್ಪು ಎಂಬುದು ಅರ್ಥವಾಗಿದೆ. ಅಷ್ಟು ದೀರ್ಘ ಕಾಲ ವಾದ ಮಾಡಬಾರದಿತ್ತು ಎಂದವರು ಹೇಳಿಕೆ ನೀಡಿದ್ದಾರೆ.