ರಣಜಿ ಸೆಮಿನಲ್ಲಿ ಕರ್ನಾಟಕಕ್ಕೆ ಬರೋಡಾ ಸವಾಲು

ಮಂಗಳವಾರ, 28 ಡಿಸೆಂಬರ್ 2010 (18:03 IST)
ರಣಜಿ ಟ್ರೋಫಿ ಸೆಮಿಫೈನಲ್ ಪ್ರವೇಶ ಮಾಡಿರುವ ಕಳೆದ ಬಾರಿಯ ರನ್ನರ್-ಅಪ್ ಕರ್ನಾಟಕ ತಂಡ ಫೈನಲ್‌ಗಾಗಿನ ಹೋರಾಟದಲ್ಲಿ ಬರೋಡಾ ತಂಡದ ಸವಾಲನ್ನು ಎದುರಿಸಲಿದೆ.

ವಡೋದರಾದಲ್ಲಿ ನಡೆಯಲಿರುವ ಈ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ವಿನಯ್ ಕುಮಾರ್ ಬಳಗ ಫೆವರೀಟ್ ಎನಿಸಿಕೊಂಡಿದೆ. ಆದರೆ ಯೂಸುಫ್ ಪಠಾಣ್ ಮತ್ತು ಮುನಾಫ್ ಪಟೇಲ್‌ರಂತಹ ರಾಷ್ಟ್ರೀಯ ಆಟಗಾರರನ್ನು ಹೊಂದಿರುವ ಬರೋಡಾ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಹೀಗಾಗಿ ಪಂದ್ಯ ರೋಚಕ ಕದನಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

ಕ್ವಾರ್ಟರ್ ಹೋರಾಟದಲ್ಲಿ ಮಧ್ಯಪ್ರದೇಶವನ್ನು ಐದು ವಿಕೆಟುಗಳಿಂದ ಮಣಿಸಿದ್ದ ಕರ್ನಾಟಕ ಲೀಗ್ ಹಂತದಲ್ಲಿಯೂ ಅಮೋಘ ಪ್ರದರ್ಶನ ನೀಡುವ ಮೂಲಕ ಸೆಮಿಗೆ ಲಗ್ಗೆಯಿಟ್ಟಿತ್ತು.

ನಾಯಕ ವಿನಯ್ ಕುಮಾರ್ ಸೇರಿದಂತೆ ತಂಡದ ಎಲ್ಲ ಪ್ರಮುಖ ಆಟಗಾರರು ಅಮೋಘ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದ್ದು, ಸೆಮಿಫೈನಲ್‌ನಲ್ಲೂ ಅಮೋಘ ಪ್ರದರ್ಶನ ನೀಡುವ ಭರವಸೆಯಲ್ಲಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ