ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ವಿನಯ್ ಗುರಿ

ಶುಕ್ರವಾರ, 31 ಡಿಸೆಂಬರ್ 2010 (11:43 IST)
ರಣಜಿ ಟ್ರೋಫಿನಲ್ಲಿ ಕರ್ನಾಟಕ ತಂಡವನ್ನು ಸೆಮಿಫೈನಲ್‌ಗೇರಿಸಿರುವ ನಾಯಕ ಆರ್. ವಿನಯ್ ಕುಮಾರ್ ಮುಂಬರುವ ಏಕದಿನ ವಿಶ್ವಕಪ್‌ಗಾಗಿನ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಹಂಬಲ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಈ ಕರ್ನಾಟಕದ ಯುವ ಬಲಗೈ ವೇಗದ ಬೌಲರ್ 15ರ ಬಳಗದಲ್ಲಿ ಸ್ಥಾನ ಪಡೆಯುವ ವಿಶ್ವಾಸ ಹೊಂದಿದ್ದಾರೆ. ವಿಶ್ವಕಪ್ ಸಂಭವನೀಯರ ಪಟ್ಟಿಯಲ್ಲಿ ಸ್ಥಾನ ದೊರೆತಿರುವುದು ಸಂತಸ ನೀಡಿದೆ. ಆದರೆ ತಂಡದಲ್ಲಿ ಸ್ಥಾನ ಪಡೆಯುವುದು ನನ್ನ ಗುರಿ ಎಂದಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿಯೂ ಉಪಯುಕ್ತ ನೆರವು ನೀಡುವತ್ತಲೂ ವಿನಯ್ ಗಮನ ಕೇಂದ್ರಿಕರಿಸಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲೂ ನೆರವಾಗುವುದು ನನ್ನ ಧ್ಯೇಯ ಎಂದವರು ಹೇಳಿದ್ದಾರೆ.

ಈ ಬಾರಿಯ ಭಾರತ ತಂಡ ಹಿರಿಯರ ಮತ್ತು ಕಿರಿಯರ ಆಟಗಾರರಿಂದ ಬಲಿಷ್ಠವಾಗಿದೆ. ಇದೇ ಪ್ರದರ್ಶನ ಮುಂದುವರಿದ್ದಲ್ಲಿ ನಮ್ಮ ತಂಡ ವಿಶ್ವಕಪ್ ಗೆಲ್ಲುವುದು ಖಚಿತ ಎಂದಿದ್ದಾರೆ.

ರಣಜಿ ಟ್ರೋಫಿನಲ್ಲಿ ಪ್ರತಿಯೊಬ್ಬ ಆಟಗಾರರ ಪ್ರದರ್ಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ನಾಯಕ ವಿನಯ್, ಕಳೆದ ಬಾರಿ ಸ್ವಲ್ಪದರಲ್ಲೇ ತಪ್ಪಿದ ಚಾಂಪಿಯನ್ ಪಟ್ಟವನ್ನು ಈ ಬಾರಿ ಆಲಂಕರಿಸಲಿದ್ದೇವೆ ಎಂದವರು ಹೇಳಿದರು.

ಕಳೆದ ಬಾರಿ ಮೈಸೂರ್‌ನಲ್ಲಿ ಮುಂಬೈ ವಿರುದ್ಧ ನಡೆದ ಫೈನಲ್ ಪಂದ್ಯವನ್ನು 6 ರನ್ನುಗಳ ಅಂತರದಿಂದ ಕಳೆದುಕೊಂಡಿದ್ದ ಕರ್ನಾಟಕ ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಬಾರಿ ಇದೀಗಲೇ ಸೆಮಿಫೈನಲ್ ಪ್ರವೇಶಿಸಿರುವ ವಿನಯ್ ಬಳಗ ಫೈನಲ್‌ಗಾಗಿನ ಹೋರಾಟದಲ್ಲಿ ಬರೋಡಾ ತಂಡದ ಸವಾಲನ್ನು ಎದುರಿಸಲಿದೆ.

ವೆಬ್ದುನಿಯಾವನ್ನು ಓದಿ