ಟೆಸ್ಟ್ ಕ್ರಿಕೆಟ್‌ಗೆ ಇಂಗ್ಲೆಂಡ್ ಆಲ್‌ರೌಂಡರ್ ಪಾಲ್ ಕಾಲಿಂಗ್‌ವುಡ್ ಮತ್ತು ಟ್ವೆಂಟಿ-20 ಕ್ರಿಕೆಟ್‌ಗೆ ಆಸ್ಟ್ರೇಲಿಯಾದ ಉಪನಾಯಕ ಮೈಕಲ್ ಕ್ಲಾರ್ಕ್ ನಿವೃತ್ತಿ ಘೋಷಿಸಿದ್ದಾರೆ.
ಕಳಪೆ ಫಾರ್ಮ್ ಹಿನ್ನೆಲೆಯಲ್ಲಿ ತೀವ್ರ ಒತ್ತಡಕ್ಕೊಳಗಾಗಿದ್ದ ಕಾಲಿಂಗ್‌ವುಡ್, ಇದೀಗ ಅಂತ್ಯಗೊಂಡ ಸಿಡ್ನಿ ಪಂದ್ಯ ತಮ್ಮ ಅಂತಿಮ ಟೆಸ್ಟ್ ಪಂದ್ಯ ಎಂದು ಈ ಹಿಂದೆಯೇ ಘೋಷಿಸಿದ್ದರು. ಹಾಗೆಯೇ ಟ್ವೆಂಟಿ-20 ಮತ್ತು ಏಕದಿನದಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದರು.
ಇದೀಗ ಆಸೀಸ್ ಉಪನಾಯಕ ಮೈಕಲ್ ಕ್ಲಾರ್ಕ್ ಕೂಡಾ ಟ್ವೆಂಟಿ-20 ಕ್ರಿಕೆಟ್‌ಗೆ ವಿದಾಯ ಹಾಡಿದ್ದಾರೆ. ಆಶಸ್ ಸರಣಿ ಸೋಲು ಅದರಲ್ಲೂ ವೈಯಕ್ತಿಕವಾಗಿ ಕಳಪೆ ಫಾರ್ಮ್ ಹಿನ್ನೆಲೆಯಲ್ಲಿ ನಿವೃತ್ತಿ ಘೋಷಿಸುವುದಾಗಿ ಕ್ಲಾರ್ಕ್ ತಿಳಿಸಿದ್ದಾರೆ.
ಕ್ಲಾರ್ಕ್ ನಿವೃತಿಯ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಪಂದ್ಯಕ್ಕಾಗಿ ಕ್ಯಾಮರೂನ್ ವೈಟ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು, ವಿಕೆಟ್ ಕೀಪರ್ ಟಿಮ್ ಪೈನೆ ಉಪನಾಯಕನ ಜವಾಬ್ದಾರಿ ವಹಿಸಲಿದ್ದಾರೆ.