ಏಕದಿನದಲ್ಲಿ ಸ್ಥಾನ ಗಟ್ಟಿ ಮಾಡಲು ಉತ್ತಮ ಅವಕಾಶ: ಶರ್ಮಾ

ಸೋಮವಾರ, 10 ಜನವರಿ 2011 (14:55 IST)
ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಏಕೈಕ ಟ್ವೆಂಟಿ-20 ಗೆಲುವಿನಲ್ಲಿ ಕಾರಣರಾಗಿದ್ದ ಭಾರತದ ರೋಹಿತ್ ಶರ್ಮಾ ಪ್ರವಾಸವನ್ನು ಉತ್ತಮ ರೀತಿಯಲ್ಲಿಯೇ ಆರಂಭಿಸಿರುವುದು ಸಂತಸ ತಂದಿದೆ ಎಂದಿದ್ದು, ಏಕದಿನ ತಂಡದಲ್ಲಿಯೂ ಸ್ಥಾನ ಗಟ್ಟಿ ಮಾಡುವ ಉತ್ತಮ ಅವಕಾಶವಿದೆ ಎಂದಿದ್ದಾರೆ.

ರೋಹಿತ್ ಬಾರಿಸಿದ್ದ ಬಿರುಸಿನ ಶತಕಾರ್ಧ (53) ಭಾರತ ಆತಿಥೇಯ ತಂಡ ವಿರುದ್ಧದ ಏಕೈಕ ಟ್ವೆಂಟಿ-20 ಪಂದ್ಯವನ್ನು 21 ರನ್ನುಗಳಿಂದ ಗೆದ್ದುಕೊಂಡಿತ್ತು. ಅಲ್ಲದೆ ಶರ್ಮಾ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.

ಶನಿವಾರ ನಡೆದ ಹರಾಜಿನಲ್ಲಿ ಶರ್ಮಾ ಅವರನ್ನು ಎರಡು ಮಿಲಿಯನ್ ಡಾಲರ್‌ಗೆ ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಇದುವೇ ಅವರ ಈ ಅಮೋಘ ಇನ್ನಿಂಗ್ಸ್‌ಗೆ ಪ್ರೇರಣೆಯಾಗಿತ್ತೇ ಎಂಬ ಪ್ರಶ್ನೆ, ಪ್ರವಾಸ ಉತ್ತಮವಾಗಿ ಆರಂಭಿಸಬೇಕಾಗಿರುವುದು ಪ್ರಮುಖವಾಗಿದೆ. ಇದೊಂದು ಸವಾಲಿನ ಪ್ರವಾಸವಾಗಿದೆ. ಹಾಗೆಯೇ ತಂಡದಲ್ಲಿ ಸ್ಥಾನ ಗಟ್ಟಿ ಮಾಡುವ ಉತ್ತಮ ಅವಕಾಶವಿದೆ ಎಂದರು.

ಮಾತು ಮುಂದುವರಿಸಿದ ಮುಂಬೈ ರಣಜಿ ಆಟಗಾರ, ದಕ್ಷಿಣ ಆಫ್ರಿಕಾದಲ್ಲಿ ಆಡಿದ ಅನುಭವ ಹೊಂದಿರುವುದು ನೆರವಿಗೆ ಬಂದಿತ್ತು ಎಂದರು. ನಾನಿಲ್ಲಿ ಟ್ವೆಂಟಿ-20 ವಿಶ್ವಕಪ್ ಮತ್ತು ಐಪಿಎಲ್ ಪಂದ್ಯಗಳನ್ನಾಡಿದ್ದೇನೆ ಎಂದವರು ಸೇರಿಸಿದರು.

ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ರೋಹಿತ್ ಜತೆಗೆ ತಂಡದ ಬೌಲರುಗಳ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರೋಹಿತ್ ಉತ್ತಮವಾಗಿ ಆಡಿದ್ದರಲ್ಲದೆ ನಮಗೆ ಅಗತ್ಯವಿದ್ದ ಆರಂಭವೊದಗಿಸಿದರು. ಈ ಪಿಚ್‌ನಲ್ಲಿ 160-170ರ ಅಸುಪಾಸಿನ ಮೊತ್ತ ಸವಾಲಿನ ಮೊತ್ತವಾಗಿತ್ತು. ನಂತರ ಪಾರ್ಟ್ ಟೈಮ್ ಬೌಲರುಗಳು ಚೆನ್ನಾಗಿ ದಾಳಿ ನಡೆಸಿದರು ಎಂದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ