ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದಿದ್ದಲ್ಲಿ ನಿವೃತ್ತಿ: ಲೀ

ಸೋಮವಾರ, 10 ಜನವರಿ 2011 (17:28 IST)
ಮುಂಬರುವ ಏಕದಿನ ವಿಶ್ವಕಪ್‌ಗಾಗಿನ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲನಾದರೆ ಕ್ರೀಡಾ ಜೀವನಕ್ಕೆ ನಿವೃತ್ತಿ ಘೋಷಿಸುವುದಾಗಿ ವೇಗದ ಬೌಲರ್ ಬ್ರೆಟ್ ಲೀ ಆಶಯ ವ್ಯಕ್ತಪಡಿಸಿದ್ದಾರೆ.

ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಅಪಾರ ಭರವಸೆಯಿದೆ. ಆಸೀಸ್ ಬೌಲಿಂಗ್ ದಾಳಿಯನ್ನು ಮತ್ತೊಮ್ಮೆ ಮುನ್ನಡೆಸುವುದು ನನ್ನ ಬಯಕೆಯಾಗಿದೆ ಎಂದವರು ತಿಳಿಸಿದರು.

ಈಗಾಗಲೇ ಟೆಸ್ಟ್‌ಗೆ ನಿವೃತ್ತಿ ಘೋಷಿಸಿರುವ ಲೀ ಅವರು 30 ಮಂದಿಯ ಸಂಭವನೀಯರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅದೇ ರೀತಿ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ವ್ಯಕ್ತಪಡಿಸಿದ್ದಾರೆ.

ಹೌದು, ನನ್ನ ಅನುಭವ ತಂಡಕ್ಕೆ ನೆರವಾಗುವ ವಿಶ್ವಾಸವಿದೆ. ನಾನೀಗ ಆಡಲು ಪೂರ್ಣ ಸಜ್ಜಾಗಿದ್ದೇನೆ ಎಂದು 34ರ ಹರೆಯದ ವೇಗದ ಬೌಲರ್ ನುಡಿದರು.

ನಾನೀಗ ಗಾಯದಿಂದ ಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. 45 ಓವರುಗಳ ಪಂ

ವೆಬ್ದುನಿಯಾವನ್ನು ಓದಿ