ಐಪಿಎಲ್-IV; ಮೊದಲ ಹಂತದಲ್ಲಿ ಎಲ್ಲ ತಂಡಕ್ಕೂ 14 ಪಂದ್ಯ

ಸೋಮವಾರ, 10 ಜನವರಿ 2011 (17:52 IST)
ಇಂಡಿಯನ್ ಪ್ರೀಮಿಯರ್ ನಾಲ್ಕನೇ ಆವೃತ್ತಿಗಾಗಿನ ತಂಡದ ವೇಳಾಪಟ್ಟಿ ಸಿದ್ಧಗೊಂಡಿದೆ. ಇದರಂತೆ ಎಲ್ಲ 10 ತಂಡಗಳು ಮೊದಲ ಸುತ್ತಿನಲ್ಲಿ ಒಟ್ಟು 14 ಪಂದ್ಯಗಳನ್ನು ಆಡಲಿವೆ. ಇದರಲ್ಲಿ ಐದು ತಂಡಗಳ ವಿರುದ್ಧ ತಲಾ ಎರಡು ಬಾರಿ ಹಾಗೂ ಉಳಿದ ನಾಲ್ಕು ತಂಡಗಳ ವಿರುದ್ಧ ತಲಾ ಒಂದು ಪಂದ್ಯಗಳಲ್ಲಿ ಭಾಗವಹಿಸಲಿದೆ.

ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್‌ನ ನಾಲ್ಕನೇ ಆವತರಿಣಿಕೆಯು ಎಪ್ರಿಲ್ 8ರಿಂದ ಮೇ 28ರ ವರೆಗೆ ನಡೆಯಲಿದೆ.

ತಂಡವೊಂದು ಆಡಲಿರುವ ಒಟ್ಟು 14 ಆಟಗಳ ಪೈಕಿ ತಲಾ ಏಳು ಪಂದ್ಯಗಳು ತವರು ಹಾಗೂ ಹೊರಗೆ ನಡೆಯಲಿವೆ. ಅಂದರೆ ಐದು ತಂಡಗಳ ವಿರುದ್ಧ ತವರು ಹಾಗೂ ಹೊರಗೆ ಆಡಳಿವೆ. ಉಳಿದಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ತವರು ಹಾಗೂ ಹೊರಗೆ ಆಡಳಿವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟನೆಯಲ್ಲಿ ತಿಳಿಸಿದೆ.

ಇದರಂತೆ ಕಳೆದ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊಚ್ಚಿ, ಪುಣೆ, ಕೊಲ್ಕತ್ತಾ, ಬೆಂಗಳೂರು ಮತ್ತು ರಾಜಸ್ತಾನ ವಿರುದ್ಧ ತಲಾ ಎರಡು ಪಂದ್ಯಗಳನ್ನು ಆಡಲಿವೆ. ಉಳಿದ ನಾಲ್ಕು ಪಂದ್ಯಗಳಲ್ಲಿ ತವರಿನಲ್ಲಿ ಡೆಲ್ಲಿ ಮತ್ತು ಡೆಕ್ಕನ್ ವಿರುದ್ಧವೂ ಹಾಗೂ ಹೊರಗೆ ಪಂಜಾಬ್ ಮತ್ತು ಮುಂಬೈ ವಿರುದ್ಧ ಆಡಳಿವೆ.

ಜನವರಿ 8 ಮತ್ತು 9ರಂದು ನಡೆದ ಹರಾಜಿನಲ್ಲಿ 127 ಆಟಗಾರರು ಒಟ್ಟು 62.8 ಮಿಲಿಯನ್ ಅಮೆರಿಕನ್ ಡಾಲರ್‌ಗೆ ಹರಾಜಾಗಿದ್ದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ